ಗಣಿತ ಕಲಿಕಮೇಳ ಪರಿಕ್ಷೆಯಲ್ಲಿ ಕುಂಠಿಮರಿ ಶಾಲೆಗೆ ಪ್ರಥಮ. ತೃತೀಯ ಸ್ಥಾನ

ಗುರುಮಠಕಲ್:ಜ.19: ಕಲ್ಯಾಣ ಕರ್ನಾಟಕದ ಗಡಿ ಭಾಗದಲ್ಲಿರುವ ಜೈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಿ ಬರುವ ಕುಠಿಮರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದನೇ ತರಗತಿಯಿಂದ ಐದನೇಯ ತರಗತಿಯ ವರೆಗೆ ಇರುವ ಒಟ್ಟು ಮಕ್ಕಳ ಸಂಖ್ಯೆ 53 ಇರುವ ಅಷ್ಟೇ ಸಣ್ಣದು ಅಷ್ಟೇ ಉತ್ತಮ ಶಿಕ್ಷಕರನ್ನು ಹೊಂದಿರುವ ಉತ್ತಮ ಶಾಲಾ ಆವರಣದಲ್ಲಿ ವಿಧ್ಯಾಭ್ಯಾಸ ಪಡೆಯುತ್ತಿರುವ ಮಕ್ಕಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಂಡಿರುವ ಗಣಿತ ಕಲಿಕ ಮೇಳ ಪರಿಕ್ಷೆಯಲ್ಲಿ ನಾಲ್ಕನೇಯ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಲಾವಣ್ಯ ಪ್ರಥಮ ಸ್ಥಾನ ಪಡೆದು ಒಂದು ಸಾವಿರ ರೂಪಾಯಿ ಪಡೆದಿರುತ್ತಾರೆ. .ಐದನೇಯ ತರಗತಿಯ ವಿದ್ಯಾರ್ಥಿ ಅಂಕಿತ ನಾಲ್ಕು ನೂರು ರೂಪಾಯಿ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ ಮತ್ತು ನಾಲ್ಕನೇಯ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ನರಸಪ್ಪ ತೃತೀಯ ಸ್ಥಾನ ಪಡೆದು ನಾಲ್ಕು ನೂರು ರೂಪಾಯಿ ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿರುವ ಮಕ್ಕಳು ಪ್ರತಿವರ್ಷವೂ ಇದೇ ರೀತಿ ಇನ್ನೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಬಹುಮಾನಗಳನ್ನು ಪಡೆಯಲ್ಲಿ ಎಂದು ಗ್ರಾಮಸ್ಥರು ಶಾಲಾ ಸಿಬ್ಬಂದಿ ಯವರು ಹರ್ಷ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಬಸವರಾಜ ಹೇಳಿಕೆಯನ್ನು ನಿಡುತ್ತ.. ನಮ್ಮ ಊರಿನ ಶಾಲೆಯಲ್ಲಿ ಮುಖ್ಯ ಗುರುಗಳು ಬಸವರಾಜಪ್ಪ. ಸಹ ಶಿಕ್ಷಕರು ಗಂಗಯ್ಯ ಮಠಪತಿ. ಮತ್ತು ಅತಿಥಿ ಶಿಕ್ಷಕಿಯರಾದ ಶ್ರೀಲತ ಅವರು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡುತ್ತಿದ್ದಾರೆ ಹಾಗೆ ಶಾಲೆಯಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳನ್ನು ಮತ್ತು ದಿನಾಚರಣೆಗಳನ್ನು ಬಹಳಷ್ಟು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಹಾಗೆ ಶಾಲೆಯಲ್ಲಿ ಚೆನ್ನಾಗಿ ಗಿಡ ಮರಗಳನ್ನು ಬೆಳೆಸಿರುತ್ತಾರೆ ಮುಖ್ಯ ಗುರುಗಳು ಮಕ್ಕಳ ಕಲಿಕೆಗೊಸ್ಕರ ಸ್ವತಹ ಅವರ ಮನೆಯಲ್ಲಿರುವ ಟಿ.ವಿ. ಯನ್ನು ಶಾಲೆಗೆ ತಂದಿರುತ್ತಾರೆ ಇಂತಹ ಉತ್ತಮ ಶಿಕ್ಷಕರನ್ನು ಪಡೆದಿರುವ ದಕ್ಕಾಗಿ ನಮ್ಮ ಶಾಲಾ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ ಗಡಿಭಾಗದಲ್ಲಿ ಇರುವ ನಮ್ಮ ಶಾಲೆ ಜಿಲ್ಲೆಯಲ್ಲಿ ಉತ್ತಮ ಹೆಸರು ಪೆಡೆಯಲು ಶಿಕ್ಷಕರು ಪ್ರಯತ್ನಿಸುತ್ತಿದ್ದರೆ ಎಂದರು ಈ ವೇಳೆ ತಮ್ಮಿರೆಡ್ಡಿ. .ಬಸವರಾಜ. ತಿಪ್ಪಣ್ಣ. ನರಸಿಂಹ. ಶ್ರೀ ನಿವಾಸ. ಹನ್ಮಂತು. ರಾಮಚಂದ್ರ ಇದ್ದರು.