ಗಣಿತವು ಎಲ್ಲಾ ವಿಷಯಗಳ ತಾಯಿ

ಕಲಬುರಗಿ:ಸೆ.21: “ಗಣಿತವು ಎಲ್ಲಾ ವಿಷಯಗಳ ತಾಯಿಯಾಗಿದೆ, ಅದು ಇಲ್ಲದೆ ನಾವು ಇತರ ವಿಷಯಗಳನ್ನು ಊಹಿಸಲು ಸಾಧ್ಯವಿಲ್ಲ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ನೂತನವಾಗಿ ಪ್ರವೇಶ ಪಡೆದಿರುವ ಬಿ.ಟೆಕ್ ಮ್ಯಾಥಮೆಟಿಕಲ್ ಕಂಪ್ಯೂಟಿಂಗ್ ಮತ್ತು ಎಂ.ಎಸ್ಸಿ ಗಣಿತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಇಂಡಕ್ಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಗಣಿತದ ಸಮೀಕರಣಗಳು ತುಂಬಾ ಮುಖ್ಯವಾಗಿದ್ದು, ಇವುಗಳಿಲ್ಲದೆ ನಾವು ಭೌತಿಕ ವಿಜ್ಞಾನಗಳನ್ನು ಮಾತ್ರವಲ್ಲದೆ ಅರ್ಥಶಾಸ್ತ್ರ ಮತ್ತು ನಿರ್ವಹಣೆಯಂತಹ ಸಾಮಾಜಿಕ ವಿಜ್ಞಾನಗಳನ್ನೂ ಸಹ ಊಹಿಸಲು ಸಾಧ್ಯವಿಲ್ಲ. ಯಾವುದೇ ವಿಷಯದಲ್ಲಿ ಮೂಲಭೂತ ಅಂಶಗಳು ಬಹಳ ಮುಖ್ಯ, ಆದ್ದರಿಂದ ಮೂಲಭೂತ ಅಂಶಗಳ ಮೇಲೆ ಕೇಂದ್ರೀಕರಿಸಿ. ನಾವು ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಅವುಗಳನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿ. ವಿದ್ಯಾರ್ಥಿ ಜೀವನ ಬಂಗಾರದμÉ್ಟ ಅಮೂಲ್ಯವಾದದ್ದು ಅದನ್ನು ವ್ಯರ್ಥ ಮಾಡಬೇಡಿ. ರಾಷ್ಟ್ರಕ್ಕೆ ಯುವ ಮತ್ತು ಸಮರ್ಪಿತ ಸಂಶೋಧಕರು ಮತ್ತು ನವೋದ್ಯಮಿಗಳ ಅಗತ್ಯವಿದೆ” ಎಂದು ಅವರು ಹೇಳಿದರು.
ಮುಖ್ಯ ಅತಿಥಿ ಎನ್‍ಐಟಿ ವಾರಂಗಲ್‍ನ ಪೆÇ್ರ. ಜಿ ರಾಧಾಕೃಷ್ಣಮಾಚಾರ್ಯ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಅμÉ್ಟ ಮುಖ್ಯವಲ್ಲ, ಇದು ನಿಮ್ಮ ಜೀವನದ ಪ್ರಾರಂಭವಾಗಿದೆ. ಬಿ.ಟೆಕ್ ಮ್ಯಾಥಮೆಟಿಕಲ್ ಕಂಪ್ಯೂಟಿಂಗ್ ಬಹಳ ನವೀನ ಮತ್ತು ವಿಶಿಷ್ಟವಾದ ಕೋರ್ಸ್ ಆಗಿದೆ. ಹೊಸ ಶಿಕ್ಷಣ ನೀತಿ ಅನ್ವಯ ಉದ್ಯಮದ ಪ್ರಸ್ತುತ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಗಣಿತ ಮತ್ತು ಕಂಪ್ಯೂಟಿಂಗ್ ವಿದ್ಯಾರ್ಥಿಗಳಿಗೆ ಅವಕಾಶಗಳಿಗೆ ಕೊನೆಯಿಲ್ಲ, ಆಕಾಶದμÉ್ಟ ವಿಶಾಲವಾದ ಅವಕಾಶಗಳಿವೆ” ಎಂದು ಹೇಳಿದರು.
ಡಿ ಆರ್ ಡಿ ಓ, ಹೈದರಾಬಾದ್ ನ ಹಿರಿಯ ವಿಜ್ಞಾನಿ ಡಾ. ಜಿ ಮಲ್ಲಿಕಾರ್ಜುನ್ ರಾವ್, ಅವರು ಮಾತನಾಡಿ “ಗಣಿತವು ಬಹಳ ಅದ್ಭುತವಾದ ವಿಷಯವಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಗಣಿತವು ಬಹಳ ಮುಖ್ಯವಾದ ವಿಷಯವಾಗಿದೆ. ಇದರ ಸಂಕೀರ್ಣ ಅಲ್ಗಾರಿದಮ್‍ಗಳು ಮತ್ತು ಕಂಪ್ಯೂಟಿಂಗ್ ಬಾಹ್ಯಾಕಾಶ ಉಪಕರಣಗಳ ತಯ್ಯಾರಿಕಾ ವೆಚ್ಚ ಕಡಿಮೆ ಮಾಡುತ್ತದೆ ಮತ್ತು ಅವುಗಳ ದಕ್ಷತೆ ಮತ್ತು ನಿಖರತೆಯನ್ನು ಹೆಚ್ಚಿಸುತ್ತದೆ. ಬಾಹ್ಯಾಕಾಶ ಯೋಜನೆಗಳಲ್ಲಿ ಸಣ್ಣ ತಪ್ಪುಗಳು ಕೂಡ ಬಹಳ ವೆಚ್ಚದಾಯಕವಾಗುತ್ತವೆ. ಆದ್ದರಿಂದ ಗಣಿತವು ಅವುಗಳನ್ನು ಪರಿಹರಿಸಲು ಸಹಕಾರಿಯಾಗುತ್ತದೆ. ನಾವು ಇನ್ನೂ ಸಂಶೋಧನೆಯಲ್ಲಿ ಸುಧಾರಿತ ಗಣಿತವನ್ನು ಬಳಸುತ್ತಿಲ್ಲ. ಗಣಿತದ ಬಳಕೆ ನಮ್ಮ ಬಾಹ್ಯಾಕಾಶ, ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮಗೆ ಹೆಚ್ಚಿನ ಜವಾಬ್ದಾರಿ ಮತ್ತು ಅವಕಾಶಗಳಿವೆ” ಎಂದು ಹೇಳಿದರು.
ಗಣಿತ ವಿಭಾಗದ ಮುಖ್ಯಸ್ಥ ಡಾ.ಜಿ.ಜನಾರ್ದನರೆಡ್ಡಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ “ಮುಂದಿನ ಮೂರು ದಿನಗಳಲ್ಲಿ ಐಐಟಿ, ಎನ್ಐಟಿ, ಡಿ ಆರ್ ಡಿ ಓ, ಐಐಎಸ್ಸಿ ಮತ್ತು ಸಿಯುಕೆಯ ಪ್ರಾಧ್ಯಾಪಕರು ಗಣಿತದ ಕಂಪ್ಯೂಟಿಂಗ್‍ನ ವಿವಿಧ ಅಂಶಗಳ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ” ಎಂದು ಹೇಳಿದರು. ಸ್ಕೂಲ್ ಆಫ್ ಫಿಸಿಕಲ್ ಸೈನ್ಸ್ ಡೀನ್ ಡಾ.ಭರತ್ ಸಹ ಮಾತನಾಡಿದರು. ಕುಮಾರಿ ಅನನ್ಯ ಮತ್ತು ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ಮೇಘನ್ ಖಂಡೇಲ್ವಾಲ್ ವಂದಿಸಿದರು. ಬಿ.ಟೆಕ್ ಮ್ಯಾಥಮೆಟಿಕಲ್ ಕಂಪ್ಯೂಟಿಂಗ್ ಮತ್ತು ಎಂ.ಎಸ್ಸಿ ಗಣಿತ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.