ಗಣಿತದಿಂದ ಸೃಷ್ಟಿಯ ರಹಸ್ಯ ಬೇಧಿಸಲು ಸಾಧ್ಯ

ವಿಜಯಪುರ:ಡಿ.23: ಜಗತ್ತಿನ ಸೃಷ್ಟಿಯ ರಹಸ್ಯಗಳನ್ನು ಬೇಧಿಸಲು ಗಣಿತಕ್ಕೆ ಮಾತ್ರ ಸಾಧ್ಯ ಎಂದು ತುಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಪದ್ಮಾ ಆಲಬಾಳ ಹೇಳಿದರು.

ಅವರು ಸಮೀಪದ ಇಟ್ಟಂಗಿಹಾಳನಲ್ಲಿರುವ ತುಂಗಳ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಗಣಿತತಜ್ಞ ರಾಮಾನುಜಂ ಅವರ ಜನ್ಮ ದಿನಾಚರಣೆ ಹಾಗೂ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಣಿತ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದರ ಕುರಿತು ಅಭಿರುಚಿ ಬೆಳೆಸಿಕೊಂಡರೆ ಅದೊಂದು ಅದ್ಭುತ ವಿಷಯ ಎಂಬುದು ತಿಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ತುಂಗಳ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟೀ ಅಶೋಕ ತುಂಗಳ ಮಾತನಾಡಿ, ವಿದ್ಯಾರ್ಥಿಗಳಿಗೆ ಗಣಿತ ಎಂಬುದು ಕಬ್ಬಿಣದ ಕಡಲೆ ಎಂಬ ಅಭಿಪ್ರಾಯ ತೊಲಗಿ ಅದನ್ನು ಖುಷಿಯಿಂದ ಅಧ್ಯಯನ ಮಾಡುವ ಮನೋಭಾವ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯೆ ಮೀನಾಕ್ಷಿ ತಳ್ಳಿ, ಉಪಪ್ರಾಚಾರ್ಯ ಜಯತೀರ್ಥ ಕುಲಕರ್ಣಿ, ಗಣಿತ ವಿಭಾಗದ ಮುಖ್ಯಸ್ಥ ವಿ. ಅರುಣ ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕ ಅಜೀತ ದವಾನಜಿ ರಾಮಾನುಜಂ ಅವರ ಜೀವನ ಕುರಿತು ಉಪನ್ಯಾಸ ನೀಡಿದರು.

ಶಿಕ್ಷಕಿ ಶೃತಿ ಬಟ್ಟಲ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಆರ್. ವಿ. ದೇಶಪಾಂಡೆ ವಂದಿಸಿದರು.