ಗಣರಾಜ್ಯೋತ್ಸವ ಹಿಂಸಾಚಾರ: ಪೊಲೀಸರ ಕ್ರಮಕ್ಕೆ ಕೋರ್ಟ್ ಆಕ್ಷೇಪ

ನವದೆಹಲಿ, ಏ ೨೬-ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಐತಿಹಾಸಿಕ ಕೆಂಪು ಕೋಟೆಗೆ ಹಾನಿಗೆ ಸಂಭವಿಸಿದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆರೋಪಿ ನಟ ದೀಪ್ ಸಿಂಧು ಜತೆ ಪೊಲೀಸರು ನಡೆದುಕೊಂದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಪಂಜಾಬಿ ನಟ ದೀಪ್ ಸಿಂಧುಗೆ ಜಾಮೀನು ಮಂಜೂರು ಮಾಡಿದೆ. ಆದರೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ನ್ಯಾಯಾಲಯ ಪ್ರಶ್ನೆ ಮಾಡಿದೆ.
ತನಿಖಾ ಅಧಿಕಾರಿಗಳ ಇಂತಹ ಕೆಟ್ಟದಾದ ಕ್ರಮವು ಸ್ಥಾಪಿತ ಅಪರಾಧ ಪ್ರಕ್ರಿಯೆಯೊಂದಿಗೆ ವಂಚನೆ ಮಾಡುವುದಕ್ಕೆ ಸಮನಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಕ್ರಮಗಳಿಂದ ಸಂವಿಧಾನದಿಂದ ರಕ್ಷಣೆ ದೊರೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಅನ್ಯಾಯವಾಗಿದೆ. ಸಿಂಧು ಅವರನ್ನು ವಿಚಾರಣೆಗಾಗಿ ಪೊಲೀಸರು ೧೪ ದಿನ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಅದರೆ ಅವರು ೭೦ ದಿನಗಳ ಕಾಲ ಕಸ್ಟಡಿಯಲಿದ್ದರು ಎಂದು ಕೋರ್ಟ್ ತಿಳಿಸಿದೆ.
ದೀಪ್ ಸಿಂಧುಗೆ ಜಾಮೀನು ನೀಡಲು ಪೊಲೀಸರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಏಕೆಂದರೆ ಈ ಪ್ರಕರಣ ಅತ್ಯಂತ ಸೂಕ್ಚ್ಮವಾಗಿರುವ ಕಾರಣ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು. ಆದರೆ ಸಿಂದೂಗೆ ೨೫ ಸಾವಿರ ವೈಯಕ್ತಿಕ ಬಾಂಡ್ ನೀಡಿ ಜಾಮೀನು ನೀಡಲಾಗಿತ್ತು.
ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ೧೬೭ ಮಂದಿ ಗಾಯಗೊಂಡಿದ್ದರು. ೧೪೪ ಮಂದಿ ಪೊಲೀಸರು ಗಾಯಗೊಂಡಿದ್ದರು. ದೇಶದ ಭವ್ಯ ಪರಂಪರೆಯಾದ ಐತಿಹಾಸಿಕ ಕೆಂಪುಕೋಟೆಗೂ ಹಾನಿಯಾಗಿ ಅಲ್ಲಿದ್ದ ಪೀಠೋಪಕರಣಗಳು ಧ್ವಂಸಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.