ಗಣರಾಜ್ಯೋತ್ಸವ ಪ್ರಯುಕ್ತ ಸಿರಿಧಾನ್ಯ ಮೇಳ

ಕೋಲಾರ, ಜ,೨೪- ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಮತ್ತು ಫಲ ಪುಷ್ಟ ಪ್ರದರ್ಶನ- ೨೦೨೪ ಕಾರ್ಯಕ್ರಮವನ್ನು ಗಣ ರಾಜ್ಯೋತ್ಸವದಂದು ಜ,೨೬ ರಂದು ಬೆಳಿಗ್ಗೆ ೧೧.೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ನಗರಾಭಿವೃದ್ದಿ ಮತ್ತು ನಗರ ಯೋಜನ ಸಚಿವರಾದ ಬಿ.ಎಸ್.ಸುರೇಶ್ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು,
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ತೃಣ ಧಾನ್ಯಗಳಾದ ರಾಗಿ.ಸಾಮೆ, ಬರಗು, ನವಣೆ, ಹಾರಕ, ಕೊರಲೆ ಮತ್ತು ಉದಲು ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿದೆ. ಇವುಗಳನ್ನು ಪೋಷಕಾಂಶಗಳ ಖಜಾನೆ ಎಂದು ಗುರುತಿಸಲಾಗಿದೆ ಅದರೆ ನಾವುಗಳು ಸಣ್ಣವರಾಗಿದ್ದ ಸಂದರ್ಭದಲ್ಲಿ ತೀವ್ರ ಬರಗಾಲ ವ್ಯಾಪಿಸಿತ್ತು. ಆಗಾ ಅಕ್ಕಿ ಸಿಗುತ್ತಿರಲಿಲ್ಲ ನಮಗೆ ಸಿಲಿ ಧಾನ್ಯಗಳೆ ಮುಖ್ಯ ಆಹಾರವಾಗಿತ್ತು, ಅಕ್ಕಿ ಶ್ರೀಮಂತರ ಪಾಲಾಗಿತ್ತು ಬಡವರಿಗೆ ಎಟುಕುತ್ತಿರಲಿಲ್ಲ, ಅದರೆ ಬಡವರು ಸೇವಿಸುತ್ತಿದ್ದ ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ವ್ಯಾಪಕವಾಗಿದ್ದ ಹಿನ್ನಲೆಯಲ್ಲಿ ಹಿಂದಿನವರು ಗಟ್ಟಿಮುಟ್ಟಾಗಿ ಅತಿ ಹೆಚ್ಚುಕಾಲ ರೋಗ ರಹಿತವಾಗಿ ಬದುಕಿರುತ್ತಿದ್ದರು ಎಂದು ನೆನಪಿಸಿದರು.
ಈಗಾ ಕಾಲ ಬದಲಾಗಿದೆ ಬಡವರು ಬಳಿಸುತ್ತಿದ್ದ ಸಿರಿಧಾನ್ಯಗಳನ್ನು ಈಗಾ ಶ್ರೀಮಂತರು ಹೆಚ್ಚು ಬಳಸುವಂತ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನಾವು ಕಾಣುತ್ತಿದ್ದೇವೆ, ಸಿರಿಧಾನ್ಯಗಳಲ್ಲಿ ಹೆಚ್ಚು ಪೋಷಕಾಂಶ ಇರುವ ಹಿನ್ನಲೆಯಲ್ಲಿ ಸರ್ಕಾರವು ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಬಿಸಿಯುಟ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಇದನ್ನೆ ಬಳಿಸಲು ಸೂಚಿಸಿದೆ ಎಂದರು.
ಸಿರಿಧಾನ್ಯಗಳಲ್ಲಿ ಗ್ಲುಟೇನ್ ಮುಕ್ತ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಾಂಕ ಹೊಂದಿದ್ದು, ಸಸಾರಜನಿಕ, ಜೀರ್ಣವಾಗುವ ನಾರಿನಾಂಶ.ಬಿ-ಮಿಟಮಿನ್‌ಗಳು,ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿರುವುದರಿಂದ ದೇಹವನ್ನು ಸಧೃಢಗೊಳಿಸುವುದರ ಜೊತೆಗೆ ಅರೋಗ್ಯವನ್ನು ಕಾಪಾಡುವಲ್ಲಿ ಮಹತ್ವ ಪಾತ್ರವನ್ನು ವಹಿಸಲಿದೆ ಎಂದು ಅಭಿಪ್ರಾಯ ಪಟ್ಟರು,
ಕಳೆದ ಡಿ.೧೩ ರಂದು ಸಿರಿಧಾನ್ಯ ಮಹತ್ವ ಕುರಿತು ಈಗಾಗಲೇ ವಿವಿಧ ಬಗೆಯ ತಿಂಡಿ ತಿನಿಸುಗಳ ತಯಾರಿಸುವ ಸ್ವರ್ಧೆ ಹಾಗೂ ಡಿ,೨೯ ರಂದು ಸಿರಿಧಾನ್ಯಗಳ ನಡೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದ ಅವರು ಈ ಭಾರಿಯ ಸಿರಿಧಾನ್ಯ ಹಾಗೂ ಸಾವಯವ ಮತ್ತು ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯಗಳ ರಾಶಿ ಪೂಜೆ. ಹಳ್ಳಿಯ ಸೂಗಡು, ಸಿರಿಧಾನ್ಯಗಳಿಂದ ನಿರ್ಮಿಸಿದ ಗಣೇಶ, ಸಿರಿಮಗ, ಸಿರಿಮಗಳು ಮತ್ತು ಸಿರಿ ಕುಟುಂಬ ಜಲಾನಯನ ಮಾದರಿ ಮತ್ತು ಕೃಷಿ ಬಾಗ್ಯ ಯೋಜನೆಯ ಮಾದರಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು,
ಈ ಕಾರ್ಯಕ್ರಮವು ಜ,೨೬ ರಿಂದ ೨೮ರವರೆಗೆ ೩ ದಿನಗಳ ಕಾಲ ಬೆಳಿಗ್ಗೆ ೧೧.೩೦ ರಿಂದ ರಾತ್ರಿ ೮ ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ಹೊಗಳಿಂದ ಸೈನೋಸಾರ್, ಹೂವಿನ ಮನೆ, ಹೊಗಳಿಂದ ನಿರ್ಮಿತ ಸೆಲ್ಫಿಪಾಯಿಂಟ್, ಮಿಕ್ಕಿ ಮೌಸ್, ಹಾಗೂ ಇತರೆ ಅಕೃತಿಗಳು, ಮೈಸೂರಿನ ಖಾತ್ಯ ಕಲಾವಿದರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಮತ್ತು ಮಾವುತನ ಕಲಾಕೃತಿಯನ್ನು ಮರಳಿನಲ್ಲಿ ಬಿಡಿಸಿರುವುದು ಸಾರ್ವಜನಿಕರನ್ನು ಆಕರ್ಷಿಸಲಿದೆ ಎಂದಯ ತಿಳಿಸಿದರು,
ಕಸದಿಂದ ರಸ-ಅನುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳಿಂದ ವಿವಿಧ ಹೊಕುಂಡಗಳ ರಚನೆ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ ಪ್ರದರ್ಶನ, ರೈತರು ಬೆಳೆದ ವಿವಿಧ ಬಗೆಯ ಹಣ್ಣು ಹೊಗಳು ಮತ್ತು ತರಕಾರಿ ಪ್ರದರ್ಶನಗಳು ಮನೆಯ ಒಳಗಡೆ ಮತ್ತು ಹೊರಗಡೆ ಬೆಳೆಯುವಂತ ವಿವಿಧ ಜಾತಿಯ ಅಲಂಕಾರಿಕ ಗಿಡಗಳು ಟೆರಿಕೋಟ ಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಹೇಳಿದರು.
ಹಣ್ಣು, ತರಕಾರಿಗಳಿಂದ ನಿರ್ಮಿತವಾದ ಫಲವೃಕ್ಷ, ಎತ್ತಿನಗಾಡಿಯಲ್ಲಿ ಹೂ, ಮತ್ತು ತರಕಾರಿಗಳ ಜೋಡಣೆ, ತರಕಾರಿಗಳಿಂದ ರಂಗೋಲಿಗಳ ವಿವಿಧ ವಿನ್ಯಾಸಗಳಲ್ಲಿ ಜೋಡಣೆ, ವಿವಿಧ ಸಿರಿಧಾನ್ಯಗಳ ಖಾದ್ಯಗಳ ಆಹಾರ ಮಳಿಗೆಗಳು, ಆತ್ಮ ಯೋಜನೆಯಡಿ ಜಿಲ್ಲಾ ವಸ್ತು ಪ್ರದರ್ಶನ, ಸಿರಿಧಾನ್ಯಗಳ ಸಂಸ್ಕರಣೆ, ಮುಂತಾದವುಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಮದ ಕಾರ್ಯಾಗಾರವನ್ನು ಏರ್ಪಡಿಸಿದೆ ಎಂದರು
ಇಷ್ಟೆ ಅಲ್ಲದೆ ರೇಷ್ಮೆ, ಮೀನುಗಾರಿಕೆ, ಅರಣ್ಯ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರೆ ಇಲಾಖೆಗಳ ಸುಮಾರು ೩೦ ಮಳಿಗೆಗಳನ್ನು ಸ್ಥಾಪಿಸಲಾಗುವುದು, ಎನ್.ಆರ್.ಇ.ಜಿ ಯೋಜನೆ ಹಾಗೂ ಎನ್.ಆರ್.ಎಲ್.ಎಂ ಯೋಜನೆಯ ಮಾದರಿ ನಿರ್ಮಾಣ ಇದೇ ಸಂದರ್ಭದಲ್ಲಿ ಶ್ರೇಷ್ಟ ಕೃಷಿಕ ಪ್ರಶಸ್ತಿಯನ್ನು ಜಿಲ್ಲಾ ಮಟ್ಟದಲ್ಲಿ ೧೦, ತಾಲ್ಲೂಕು ಮಟ್ಟದಲ್ಲಿ ೫ ಮಂದಿಯನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು ಎಂದು ವಿವರಿಸಿದರು,
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಅವರು ಜಿಲ್ಲಾಧಿಕಾರಿಗಳೊಂದಿಗೆ ಕೆಲವು ವಿಷಯಗಳಿಗೆ ಧ್ವನಿಗೊಡಿದರು,
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಪದ್ಮಬಸವಂತಪ್ಪ, ಅಪರಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಳ್, ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು,