ಗಣರಾಜ್ಯೋತ್ಸವ ಪಥಸಂಚಲನ : ಪ್ರೇಕ್ಷಕರ ಸಂಖ್ಯೆಗೆ ಮಿತಿ

ನವದೆಹಲಿ,ಜ.೧೫- ದೇಶದಲ್ಲಿ ಕೊರೊನಾ ಸೋಂಕಿನ ಸಾಂಕ್ರಾಮಿಕ ರೋಗದ ಕರಿ ನೆರಳಿನಲ್ಲಿ ಎರಡನೇ ಬಾರಿಗೆ ಈ ತಿಂಗಳ ೨೬ ರಂದು ಗಣರಾಜ್ಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ದೆಹಲಿಯ ರಾಜಪಥದಲ್ಲಿ ಕಳೆದ ವರ್ಷ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ೨೫೦೦೦ ಮಂದಿ ಪಾಲ್ಗೊಂಡಿದ್ದರು.ಈ ಬಾರಿ ೨೪,೦೦೦ ಜನರಿಗೆ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ
ಸಾಮಾನ್ಯ ಪ್ರೇಕ್ಷಕರು, ಗಣ್ಯರು, ಸರ್ಕಾರಿ ಅಧಿಕಾರಿಗಳು, ಮಕ್ಕಳು, ಎನ್.ಸಿ.ಸಿ ಕೆಡೆಟ್‌ಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಮತ್ತಿತರ ಬಗ್ಗೆ ಗಣರಾಜ್ಯೋತ್ಸವ ಪಥಸಂಚಲನ ವೀಕ್ಷಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಕಳೆದ ಬಾರಿಯಂತೆ, ಈ ಬಾರಿಯೂ ಗಣರಾಜ್ಯೋತ್ಸವಕ್ಕೆ ವಿದೇಶದ ಮುಖ್ಯಸ್ಥರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿಲ್ಲ .
ಭಾರತ ಐದು ಮಧ್ಯ ಏಷ್ಯಾ ರಾಷ್ಟ್ರಗಳ ಅಧ್ಯಕ್ಷರಾದ ಕಜಕಿಸ್ತಾನದ ಕಸ್ಸಿಮ್-ಜೊಮಾರ್ಟ್ ಟೊಕಾಯೆವ್, ಉಜ್ಬೇಕಿಸ್ತಾನ್‌ನ ಶವ್ಕತ್ ಮಿರ್ಜಿಯೊಯೆವ್, ತಜಕಿಸ್ತಾನದ ಎಮೋಮಾಲಿ ರಹಮಾನ್, ತುರ್ಕಮೆನಿಸ್ತಾನ್‌ನ ಗುರ್ಬಂಗುಲಿ ಬರ್ಡಿಮುಹಮೆಡೋವ್ ಮತ್ತು ಕಿರ್ಗಿಸ್ತಾನ್‌ನ ಮುಖ್ಯ ಅತಿಥಿಗಳಾಗಿ ಗಣಪಾಲ್ಗೊಳ್ಳುವ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ.
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -೧೯ ಪ್ರಕರಣಗಳಿಂದಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ರದ್ದು ಮಾಡಿದ್ದರು. ಸಾಂಕ್ರಾಮಿಕ ರೋಗಕ್ಕೆ ಮುನ್ನ ಸುಮಾರು ೧.೨೫ ಲಕ್ಷ ಜನರು ಮೆರವಣಿಗೆಗೆ ಹಾಜರಾಗಿದ್ದರು, ಕಳೆದ ವರ್ಷ ೨೫,೦೦೦ ಕ್ಕೆ ಇಳಿಸಲಾಯಿತು, ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಇನ್ನೂ ೧,೦೦೦ ಮಂದಿ ಕಡಿಮೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
೫,೨೦೦ ಆಸನಗಳು ಸಾಮಾನ್ಯ ಪ್ರೇಕ್ಷಕರಿಗೆ, ಅವರು ಟಿಕೆಟ್ ಖರೀದಿಸಬಹುದು. ಉಳಿದ ೧೯,೦೦೦ ಅಥವಾ ಅದಕ್ಕಿಂತ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ.ಪ್ರೇಕ್ಷಕರಿಗೆ ಲಸಿಕೆ ಬೇಡಿಕೆಗಳಿಗಾಗಿ ಅಧಿಕಾರಿಗಳು ಇನ್ನೂ ಪ್ರೋಟೋಕಾಲ್‌ಗಳನ್ನು ರೂಪಿಸುತ್ತಿದ್ದಾರೆ. ಎರಡು ಬಾರಿ ಲಸಿಕೆ ಹಾಕಿಸಿಕೊಂಡವರಿಗೆ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಒಳಗೊಂಡಿರುವ ವೇದಿಕೆಯಲ್ಲಿ ವಿವಿಐಪಿಎಸ್ ಮಾತ್ರ ಆಸೀನರಾಗಲು ಅವಕಾಶ ಮಾಡಿಕೊಡಲಾಗಿದೆ.