ಗಣರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಸೂಚನೆ

ಸಿರವಾರ,ಜ.೧೮- ಕಳೆದ ೨ ವರ್ಷಗಳಿಂದ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತಿತ್ತು. ಆದರೆ ಈ ಬಾರಿ ಎಲ್ಲಾರೂ ಸೇರಿ ವಿಜೃಂಭಣೆಯಿಂದ ಆಚರಣೆ ಮಾಡೋಣ, ಎಲ್ಲಾ ಅಧಿಕಾರಿಗಳು ತಪ್ಪದೆ ಭಾಗವಹಿಸಬೇಕು ಎಂದು ತಹಸೀಲ್ದಾರ ವಿಜಯೇಂದ್ರಹುಲಿನಾಯಕ ಹೇಳಿದರು.
ತಹಸೀಲ್ದಾರ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಜ.೨೬ ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಯ ಸಲಹೆ ಸೂಚನೆಗಳನ್ವಯ ಬೆಳಿಗ್ಗೆ ೮ ಗಂಟೆಗೆ ತಮ್ಮ ತಮ್ಮ ಇಲಾಖೆ ಕಚೇರಿಗಳಲ್ಲಿ ಧ್ವಜಾರೋಹಣ ನೇರವೇರಿಸಿ, ನಂತರ ೯ ಗಂಟೆಗೆ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕಿಯರ ಪ್ರೌಢ ಶಾಲೆಯಲ್ಲಿ ತಾಲೂಕ ಆಡಳಿತದಿಂದ ವೇದಿಕೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಪಟ್ಟಣದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ಎಲ್ಲಾ ಇಲಾಖೆ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳಬೇಕು, ಗಣರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಹಕರಿಸಬೇಕು. ತಾಲೂಕ ವೈದ್ಯಾಧಿಕಾರಿ ಡಾ.ಚಂದ್ರಶೇಖರ, ಡಾ. ಮಲ್ಲಿಕಾರ್ಜುನ ರೆಡ್ಡಿ, ರೈತ ಸಂಪರ್ಕ ಕೇಂದ್ರ ಅಧಿಕಾರಿ ಫವಿದಾ ಬೇಗಂ, ಬಾಲಕರ ಪ್ರೌಡ ಶಾಲೆಯ ಪ್ರಾಚಾರ್ಯ ಸುರೇಶ, ಪ.ಪಂ ಸಮುದಾಯ ಅಧಿಕಾರಿ ಹಂಪಯ್ಯ ಪಾಟೀಲ್, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬೆಂಟಿನಾಳ್, ಕಾರ್ಮಿಕ ಇಲಾಖೆ ಶರಣಬಸವ ಕಡ್ಲಿ, ಶಿರಸ್ತೆದಾರ ವಿಜಯಕುಮಾರ ಸುಗಂದಿ, ಫಕೃದ್ಧಿನ್, ಸಮೂಹ ಸಂಪನ್ಮೂಲ ವ್ಯಕ್ತಿ ರವಿ ನಾಯಕ್, ಕರವೇ ತಾಲೂಕಾಧ್ಯಕ್ಷ ರಾಘವೇಂದ್ರ ಖಾಜನಗೌಡ, ಯಮನೂರಪ್ಪ ದೈಹಿಕ ಶಿಕ್ಷಕ ಮಹೇಬೂಬ್, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಅಧಿಕಾರಿ ಶರಣಬಸವ, ಶ್ರೀದೇವಿ, ಸಿಡಿಪಿಓ ಇಲಾಖೆಯ ಜಲಾಲ್, ತಾ.ಪಂ ಶಿವಲಿಂಗ, ಕೃಷ್ಣವೇಣಿ, ಪಟ್ಟಣ ಪಂಚಾಯತ ಸದಸ್ಯ ಸೂರಿ ದುರುಗಣ್ಣ ನಾಯಕ, ಬಸವರಾಜ ಭಂಡಾರಿ ಸೇರಿದಂತೆ ಇತರರಿದ್ದರು.