ಗಣರಾಜ್ಯೋತ್ಸವದ ಪೂರ್ವ ಬಾವಿ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜ.12: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವ ಬಾವಿ ಸಭೆ ಇಂದು ನಡೆಯಿತು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ಈ ತಿಂಗಳ 26 ರಂದು ನಡೆಯಲಿರುವ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವ ಬಾವಿ ಸಭೆ ನಡೆದಿದ್ದು, 
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಟಿ ಸುರೇಶ್ ಕುಮಾರ್, ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಅದ್ದೂರಿಯಾಗಿ ನಡೆಸಲಾಗುವುದು ಮತ್ತು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಓ ಜಾನಕೀ ರಾಮ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರಿಂದ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಉತ್ಸಾಹ ಮೂಡುತ್ತದೆ ಮತ್ತು ಅವರ ಕಲೆಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ನೀಡುವುದರಿಂದ ಅವರ ಕಲೆಯನ್ನು ಅವರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಚಿದಾನಂದಪ್ಪ ಪ ವ ಕ ಆ, ಶ್ರೀಮತಿ ಮಾಲತಿ ಸ ಕ ಇ ಸ ನಿ, ಸಿಡಿಪಿಓ ಸವಿತಾ ಪಾತಲಿಂಗಪ್ಪ, ಅಕ್ಷರ ದಾಸೋಹ ಸ ನಿ ಮಧು ಕುಮಾರ್ ಟಿ ಎಚ್ ಓ. ಗೋವಿಂದಪ್ಪ ಪ್ರಿನ್ಸಿಪಾಲರು,  ರಂಗಪ್ಪ ಸ ನಿ ಪ ಸಂ, ತಿಪ್ಪೇಸ್ವಾಮಿ, ಕೆ. ಎಂ. ಎನ್. ವಿಜಯಲಕ್ಷ್ಮಿ ವಕೀಲರು, ಆರ್ ಐ ಪ್ರಾಣೇಶ್, ಆಂಜನಪ್ಪ, ಮೈಲಾರಪ್ಪ ಸುಂಕದ್ ಆದೀಕ್ಷಕರು, ಇನ್ನು ಮುಂತಾದವರಿದರು.