ಗಣರಾಜ್ಯೋತ್ಸವಕ್ಕೆ ವಿಜಯನಗರ ಜಿಲ್ಲೆ ಧ್ವಜಾರೋಹಣಕ್ಕೆ ಆಂತರಿಕೆ ಸಿದ್ದತೆ

ಬಳ್ಳಾರಿ ಜ 13 : ಸಚಿವ ಆನಂದ್ ಸಿಂಗ್ ಅವರು ಅಂದುಕೊಂಡತೆ ಎಲ್ಲವೂ ನಡೆದರೆ. ಈ ತಿಂಗಳ 26 ರಂದು ಗಣರಾಜ್ಯೋತ್ಸವದಂದೇ ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲೆಯ ಧ್ವಜಾರೋಹಣ ನೆರವೇರಿಸಲು ಆಂತರಿಕ ಸಿದ್ದತೆ ನಡೆದಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಿದೆ. ಇದಕ್ಕೆ ಸಂಪುಟದ ಅನುಮೋದನೆ ನೋಡಿ ಅಧಿಸೂಚನೆಯನ್ನೂ ಹೊರಡಿಸಿದೆ. ಆಕ್ಷೇಪಣೆಗೆ ಅವಕಾಶ ನೀಡಿದ್ದು ಇಂದು ಅದಕ್ಕೆ ಕೊನೆಯಾಗಲಿದೆ. ಆಕ್ಷೇಪಣೆಗಳಿಗೆ ಸರ್ಕಾರ ಸೂಕ್ತ ಉತ್ತರ ನೀಡಿ ಜಿಲ್ಲೆ ರಚನೆಗೆ ರಾಜ್ಯಪಾಲರು ಅಂತಿಮ ಮುದ್ರೆ ಹೊತ್ತಬಹುದು. ಇದಕ್ಕೆ ಬೇಕಾದ ಸಿದ್ದತೆಗಳನ್ನು ಸರ್ಕಾರದಲ್ಲಿ ಸಚಿವ ಸಿಂಗ್ ಅವರು ನಡೆಸಿದ್ದಾರೆಂದು ತಿಳಿದು ಬಂದಿದೆ.
ಆನಂದ್ ಸಿಂಗ್ ಅವರ ಆಶಯದಂತೆ ಈ ತಿಂಗಳ 26 ರಂದು ಹೊಸಪೇಟೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಜಯನಗರ ಜಿಲ್ಲೆಯ ಘೊಷಣೆಯೊಂದಿಗೆ. ತಾವೇ ಆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ರಾಷ್ಟ್ರಧ್ವಜಾರೋಹಣ ಮಾಡಿ ಐತಿಹಾಸಿಕ ಭಾಷಣಕ್ಕೆ ಸಿದ್ದತೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಸಧ್ಯ ಅಧಿಕಾರಿ ವಲಯದಲ್ಲೂ ಸಿದ್ದತೆ ನಡೆದಿದೆ ಎಂದು ತಿಳಿದುಬಂದಿದೆ. ಆ ವೇಳೆಗೆ ವಿಜಯನಗರ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿ ನೇಮಕವೂ ನಡೆಯಲಿದೆಯಂತೆ.
ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾದರೆ. ಅಂದು ಬಳ್ಳಾರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭ ಜಿಲ್ಲಾಧಿಕಾರಿಗಳ ಮೂಕ ನಡೆಯಲಿದೆ. ಇಲ್ಲವೇ ತಾವು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಬೇಕು ಎಂದು ಬಯಸಿರುವ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರನ್ನು ಚಿತ್ರದುರ್ಗ ಜಿಲ್ಲೆ ಸ್ತುವಾರಿಯಿಂದ ಮುಕ್ತಿಗಿಳಿಸಿ ಇಲ್ಲಾವೇ, ಎರೆಡು ರಾಜ್ಯಗಳ ಉಸ್ತುವಾರಿಯನ್ನು ನೀಡಿ. ಶ್ರೀರಾಮುಲು ಅವರಿಗೆ ಇಲ್ಲಿ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣಕ್ಕೆ ಅವಕಾಶ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲವುದಕ್ಕೂ ಈ ತಿಂಗಳ 20 ರೊಳಗೆ ಸ್ಪಷ್ಟ ಮಾಹಿತಿ ದೊರೆಯುವ ಸಾಧ್ಯತೆ ಇದೆ.