ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅಭೂತಪೂರ್ವ ಕಾರ್ಯಕ್ರಮ

ಮೈಸೂರು: ಮಾ.06:- ಮೈಸೂರಿನ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ಮೈಸೂರಿಗರು ಸಾಕ್ಷಿಯಾದರು.
ಯಾವಾಗ ಏನೇ ಕಾರ್ಯಕ್ರಮ ನಡೆದರೂ ಸಾಮಾನ್ಯವಾಗಿ ಹೊರರಾಜ್ಯಗಳ ಭಕ್ತರೇ ಸೇರಿರುತ್ತಾರೆ.ಆದರೆ ಶ್ರೀ ಗಳು ಮೈಸೂರಿನವರೇ ಆಗಿದ್ದರೂ ಮೈಸೂರಿನ ಭಕ್ತರು ಹೆಚ್ಚು ಸೇರಲಾಗುತ್ತಿರಲಿಲ್ಲ.
ಇಂದು ಮೈಸೂರಿಗರು ಸೇರಿದ್ದರಿಂದ ಕನ್ನಡ ಕಲರವ ಎದ್ದುಕಾಣುತ್ತಿತ್ತು. ಇದು ಗಣಪತಿ ಶ್ರೀಗಳನ್ನು ಕಾಡುತ್ತಲೇ ಇತ್ತು.ಹಾಗಾಗಿ ಈ ಭಾನುವಾರ ಕೇವಲ ಮೈಸೂರಿನ ಭಕ್ತರನ್ನು ಅವಧೂತ ಪೀಠದ ವತಿಯಿಂದ ಮನೆ,ಮನೆಗೆ ಭೇಟಿ ನೀಡಿ ಅಕ್ಷತೆ ಕೊಟ್ಟು ಆಹ್ವಾನಿಸಲಾಗಿತ್ತು.
ಆದ್ದರಿಂದ ಈ ಭಾನುವಾರ ಮೈಸೂರಿನ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.ಇದೊಂದು ರೀತಿ ಶ್ರೀಗಳೊಂದಿಗಿನ ಭಕ್ತರ ಸುಮಧುರ ಮಿಲನದಂತೆ ಕಾಣುತ್ತಿತ್ತು.
1966ರಲ್ಲಿ ಅವಧೂತ ದತ್ತಪೀಠ ಸ್ಥಾಪನೆಯಾದಾಗಿನಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಭಕ್ತರೆಲ್ಲ ಇಲ್ಲಿ ಸೇರಿದ್ದುದು ವಿಶೇಷವಾಗಿತ್ತು.
ಈ ವೇಳೆ ಭಕ್ತರನ್ನುದ್ದೇಶಿಸಿ ದಿವ್ಯ ಸಂದೇಶ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ರಾಮನಾಮದಲ್ಲಿ ಅದ್ಭುತ ಶಕ್ತಿ ಇದೆ ಎಂದು ತಿಳಿಸಿಕೊಟ್ಟರು.
ಆ ಪರಮಶಿವ ಕೂಡಾ ರಾಮನಾಮ ಸ್ಮರಣೆ ಮಾಡಿತ್ತಿದ್ದ.ಶಿವನಿಗೂ ಇದು ಅತೀ ಪ್ರೀತಿ ಪ್ರತಿದಿನ ಎಲ್ಲರೂ ರಾಮನಾಮ ಜಪಿಸಬೇಕು ಹಾಗೂ ಕೇಳಬೇಕು ಎಂದು ಹೇಳಿದರು.
ಮಾನವ ಜನ್ಮ ಅಪರೂಪದ ಕೊಡುಗೆ, ಇದು ಸದುಪಯೋಗವಾಗಬೇಕು.ಇದು ಆಧ್ಯಾತ್ಮಿಕ ಸಾಧನೆ ಮಾಡಲಿ ಎಂದು ದೇವರ ಕೊಟ್ಟ ವರ. ಮಾನವನಾದಮೇಲೆ ತೊಂದರೆ ಇದ್ದೇ ಇರುತ್ತದೆ.ಆದರೆ ಸಮಯ ವ್ಯರ್ಥ ಮಾಡದೆ ಗುರು ಸ್ಮರಣೆ ಮಾಡಬೇಕು,ಗುರುಸ್ಮರಣೆ ಮಾಡಿದರೆ ಒಳ್ಳೆಯದು,ಅಜ್ಞಾನ ದೂರವಾಗಲು ಗುರುವನ್ನು ಆಶ್ರಯಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ದತ್ತಾತ್ರೆಯನ ದರುಶನ ಮಾಡಿದರೆ ಏಳು ತಲೆಮಾರಿಗೆ ಊಟ ಸಿಗಲಿದೆ.ಆಶ್ರಮಕ್ಕೆ ಭಕ್ತರು ಬರಬೇಕು,ದತ್ತ,ಹನುಮ,ಗಣಪತಿ ದರ್ಶನ ಮಾಡಿ ಎಂದು ಸ್ವಾಮೀಜಿ ಕರೆ ನೀಡಿದರು.
ಏಳು ತಲೆಮಾರಿನವರಿಗೂ ಒಳಿತಾಗಲಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾರೈಸಿದರು. ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಆಶ್ರಮದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಮೈಸೂರು ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಶ್ರೀಗಳಿಗೆ ಮೈಸೂರು ಎಂದರೆ ಅಚ್ಚುಮೆಚ್ಚು.ಇಲ್ಲಿನ ಎಲ್ಲಾ ಭಕ್ತರನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದಾರೆ.ಶ್ರೀಗಳಿಗೂ ಭಕ್ತರಿಗೂ ಇರುವ ಆಧ್ಯಾತ್ಮಿಕ, ಲೌಖಿಕವಾಗಿ ಇರುವ ಸಂಬಂಧವನ್ನು ನಿಮ್ಮ ಮುಂದಿನ ಪೀಳಿಗೆಗೂ ತಿಳಿಸಬೇಕೆಂದು ತಿಳಿಸಿದರು.