ಗಣಪತಿ ಕನ್ನಡ ಭಾವುಟದ ವಿಶೇಷ ಅಲಂಕಾರ

ತುಮಕೂರು, ನ. ೪- ಇಲ್ಲಿನ ಆರ್‌ಟಿ ನಗರದ ಹೋರಿ ಮುದ್ದಣ್ಣ ಕಾಂಪೌಂಡ್‌ನ ಶ್ರೀ ಸಿದ್ಧಿಗಣಪತಿ ಸೇವಾ ಸ್ಥಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗಣಪತಿಗೆ ಕನ್ನಡ ಬಾವುಟದ ಬಣ್ಣದ ವಿಶೇಷ ಅಲಂಕಾರ ಮಾಡಲಾಗಿತ್ತು.
ಹಿರೇಮಠದ ಅರ್ಚಕರಾದ ಸುನೀಲ್‌ಶಾಸ್ತ್ರಿ ಅವರು ಈ ವಿಶೇಷ ಅಲಂಕಾರ ಮಾಡಿದ್ದರು.
ಭಕ್ತರಾದ ಮಂಗಳಮ್ಮ ಗಿರಿಧರ್ ಅವರು ದೇವಸ್ಥಾನಕ್ಕೆ ಪ್ರಭಾವಳಿಯನ್ನು ಕಾಣಿಕೆಯಾಗಿ ನೀಡಿದರು. ಸಂಕಷ್ಟ ಚತುರ್ತಿ ಪ್ರಯುಕ್ತ ಸಿದ್ಧಿ ಗಣಪತಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡಿದರು.
ಹೋರಿ ಮುದ್ದಣ್ಣ ಕಾಂಪೌಂಡಿನ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಂಜಣ್ಣ, ಕಾರ್ಯದರ್ಶಿ ರೇಣುಕಾಪ್ರಸಾದ್, ಮುಖಂಡರಾದ ಮಹೇಶ್, ಬಸವರಾಜು, ಶಿವಾನಂದ್, ನಾಗರಾಜು, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.