ಹುಬ್ಬಳ್ಳಿ,ಸೆ.24: ಮರಾಠಾ ಸಮಾಜದ ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಸಮಿತಿಯ ಆಶ್ರಯದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಯನ್ನು 5ನೇ ದಿನಕ್ಕೆ ಪಲ್ಲಕ್ಕಿ ಮೆರವಣಿಗೆ ಮಾಡುವ ಮುಖಾಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಮರಿಪೇಟೆ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ಪೂಜೆಯಲ್ಲಿ ಸೇರಿದ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸುನಿಲ್ ಕನಸೇ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಮಯದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ, ಧರ್ಮದರ್ಶಿಗಳಾದ ಬಸವಂತ ಸಿಂದೆ, ಪತ್ರಕರ್ತರಾದ ಪರಶುರಾಮ ತಹಶಿಲ್ದಾರ, ವಿನೋದ್ ಪಡತರೆ, ದಯಾನಂದ ಚೌಹಾಣ್, ಶಶಿಕಾಂತ್ ಗಾಯಕ್ವಾಡ್ . ದಿನೇಶ್ ವಾಗ್ಮೊಡೆ, ಮಂಜು ಮರಾಠೆ, ಸಂಜಯ್ ಸಾಠೆ, ಮೇಘನಾ ಮರಾಠೆ, ಪದ್ಮಾವತಿ ಮರಾಠೆ ಹಾಗೂ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಧರ್ಮದರ್ಶಿಗಳು ಉಪಸ್ಥಿತರಿದ್ದರು.