ಗಣನೀಯ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ

ದಾವಣಗೆರೆ: ಜ್ಞಾನಸೌರಭ ಕಲ್ಚರಲ್ ಅಂಡ್ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಇಲ್ಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗಾಗಿ ಇಲ್ಲಿನ ಆರ್.ಹೆಚ್. ಗೀತಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಚಿತ್ರಗೀತೆಗಳ ಕರೋಕೆ ಗಾಯನ ಸ್ಪರ್ಧೆಯನ್ನು ನಿವೃತ್ತ ಶಿಕ್ಷಕಿಯಾದ ನಾಗರತ್ನಮ್ಮ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಡಿ. ಮಹೇಶ್ವರಪ್ಪ ವಹಿಸಿಕೊಂಡಿದ್ದರು. ಮುಖ್ಯಅತಿಥಿಗಳಾಗಿ ಎ.ಎಸ್. ಮೃತ್ಯುಂಜಯ, ಮಹಾಂತೇಶ್ ಒಣರೊಟ್ಟಿ, ನಿಟುವಳ್ಳಿ ಪ್ರವೀಣ್‌ಕುಮಾರ್, ಶ್ರೀಕಾಂತ್ ಭಟ್, ರುದ್ರಾಕ್ಷಿಬಾಯಿ, ಶಿಲ್ಪ, ಟ್ರಸ್ಟಿನ ಕಾರ್ಯದರ್ಶಿ, ನಿವೃತ್ತ ಶಿಕ್ಷಕಿ ಪುಷ್ಪಾ ಮತ್ತಿತರರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಲ್ಲಿಸಿದ ೧೫ ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು, ೨೫ಕ್ಕೂ ಹೆಚ್ಚು ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.