ಗಣಧಾಳ:ಆಂಜನೇಯ ಸ್ವಾಮಿ ಜಾತ್ರೆ ರದ್ದು

ರಾಯಚೂರು.ಏ.೧೯-ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ಜಾತ್ರಮಹೋತ್ಸವವನ್ನು ರದ್ದು ಮಾಡಲಾಗಿದೆ.
ತಾಲೂಕಿನ ಗಣಧಾಳ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವು ಏ.೨೧ರಂದು ನಡೆಯಬೇಕಿತ್ತು ಆದರೆ ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದು ಅದರಿಂದ ತಹಶೀಲ್ದಾರ್,ಗ್ರಾಮದ ಮುಖಂಡರು ಹಾಗೂ ದೇವಸ್ಥಾನ ಸೇವಾ ಸಂಸ್ಥೆಯೊಂದಿಗೆ ಚರ್ಚಿಸಿ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.