ಗಣದಿನ್ನಿ ಗ್ರಾ.ಪಂ:ಪರಿಸರ ದಿನಾಚರಣೆ

ರಾಯಚೂರು.ಜು.೦೫.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಣದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಸಸಿಯನ್ನು ನೇಡುವುದರ ಮೂಲಕ ಆಚರಣೆ ಮಾಡಲಾಯಿತು.
ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೋವಿಡ್ ಹಿನ್ನಲೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕೋವಿಡ್ ಮಾರ್ಗ ಸೂಚಿಗಳನ್ನು ಅನುಸರಿಸಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಯನ್ನು ನೇಡುವುದರ ಮೂಲಕ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಹಂಪಮ್ಮ ಸದಸ್ಯರಾದ ಸೂಗೂರಯ್ಯ ಹಿರೇಮಠ, ಅಂಬಣ್ಣ ಕಡದೊಡ್ಡಿ, ಮುದುಕಪ್ಪ, ಪ್ರಕಾಶ, ಹನುಮಂತ, ಪ್ರಭು ಸಾಹುಕಾರ, ಹುಳಿಗೆಪ್ಪ, ಕರವಸೂಲಿಗಾರ ಶರಣಯ್ಯ,ಮಲ್ಲೇಶ್,ಅಜನೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.