ಗಣದಿನ್ನಿ- ಊಟದ ಪೊಟ್ಟಣ ಮಾಸ್ಕ್ ವಿತರಣೆ

ಸಿರವಾರ.ಜೂ.೦೨-ಕೊವೀಡ್ ವೈರಸ್ ತಡೆಯುವಲ್ಲಿ ಆರೋಗ್ಯ ಇಲಾಖೆಯವರ ಜೊತೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದೆ, ಪ್ರತಿಯೊಂದು ಮನೆಗೆ ತೆರಳಿ ಸಮೀಕ್ಷೆ ಮಾಡಿ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತಿ, ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಊಟ, ಮಾಸ್ಕ್ ವಿತರಣೆ ಮಾಡಿ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶಕ್ಕೂ ಈ ಬಾರಿ ಕೊರೊನಾ ವೈರಸ್ ಹರಡಿಕೊಂಡಿದ್ದೆ, ಪ್ರತಿಯೊಬ್ಬ ಸಿಬ್ಬಂದಿಗಳು ಗ್ರಾಮ, ಹಳ್ಳಿಗಳಲ್ಲಿರುವ ಮನೆಗಳಿಗೆ ತೆರಳಿ ಆರೋಗ್ಯ ಸಮಸ್ಯೆಯನ್ನು ಸಮಿಕ್ಷೆ ಮಾಡಿ. ತಾಲೂಕಿನ ಎಲ್ಲಾ ಕಡೆಗಳಲ್ಲಿ ಆರ್.ಎ.ಎನ್ ಪೌಂಡೇಶನ್ ವತಿಯಿಂದ ಊಟ, ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹೇಳಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ವ್ಯವಸ್ಥೆ ಮಾಡುವಂತೆ ದೂರವಾಣಿ ಮೂಲಕ ಹೇಳಿದರು.ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಹಿರಿಯ ಜೆಡಿಎಸ್ ಮುಖಂಡ ಜಿ.ಲೋಕರೆಡ್ಡಿ, ಮಾನ್ವಿ ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ,ಗ್ರಾ.ಪಂ ಸದಸ್ಯ ಸೂಗೂರೇಶ ಸ್ವಾಮಿ.ರವಿಕುಮಾರ್ ವಕೀಲ,,ಗೋಪಾಲ ನಾಯಕ ಹರವಿಈರಣ್ಣನಾಯಕ,ಬಿಹೆಚ್.ಸಿ ಶ್ರೀಧೇವಿನಾಯಕ ಸೇರಿದಂತೆ ಇನ್ನಿತರರು ಇದ್ದರು