ಗಣಜಲಖೇಡ: ಶರಣಬಸವೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ,ಏ.10-ತಾಲ್ಲೂಕಿನ ಸುಕ್ಷೇತ್ರ ಗಣಜಲಖೇಡ ಗ್ರಾಮದ ಶರಣಬಸವೇಶ್ವರರ 75ನೇ ಜಾತ್ರಾ ಮಹೋತ್ಸವವು ಮುತ್ಯಾನ ಬಬಲಾದನ ಗುರುಪಾದಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜರುಗುವುದು.
ಏ.10 ರಂದು ಸಾಯಂಕಾಲ 5 ಗಂಟೆಗೆ ಪಲ್ಲಕ್ಕಿ ಉತ್ಸವ, ನಂತರ ಉಚ್ಛಾಯಿ, ರಾತ್ರಿ 7 ಗಂಟೆಗೆ ಲಕ್ಷ ದೀಪೋತ್ಸವ ಮತ್ತು ಮಹಾಪ್ರಸಾದ ವಿತರಣೆ ನಡೆಯಲಿದೆ.
ಏ.11 ರಂದು ಬೆಳಿಗ್ಗೆ 6 ಗಂಟೆಗೆ ಶರಣಬಸವೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ 2 ಗಂಟೆಗೆ ಕಳಸಾರೋಹಣ, ನಂದಿಕೋಲ ಹಾಗೂ ಕುಂಭ ಮೆರವಣಿಗೆ, ಸಾಯಂಕಾಲ 6.30ಕ್ಕೆ ರಥೋತ್ಸವ, ರಾತ್ರಿ 10 ಗಂಟೆಗೆ ಕಂಗೆಟ್ಟ ಹುಲಿ ಅರ್ಥಾತ್; ಸಹೋದರರ ಸವಾಲ ಸುಂದರ ಸಾಮಾಜಿಕ ನಾಟಕ ಪ್ರದರ್ಶನ, ಏ.12 ರಂದು ಮಧ್ಯಾಹ್ನ 4 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ನಡೆಯುವವು.