
ಕರಜಗಿ,ಮಾ.3-ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಹೊಸದಾಗಿ ಆದೇಶ ಹಾಕಿಕೊಂಡು ಬಂದಿರುವ ಗಣಕಯಂತ್ರ ಶಿಕ್ಷಕ ಸಂಗಮೇಶ್ ಪಾಕಿನ್ ಅವರ ಆದೇಶ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ವಸತಿ ಶಾಲೆಯ ಪ್ರಾಂಶುಪಾಲರಿಗೆ ಮನವಿಪತ್ರ ಸಲ್ಲಿಸಿದರು.
ಸಂಗಮೇಶ ಪಾಕೀನ್ ಅವರು ಚಿಂಚೋಳಿ ತಾಲೂಕಿನ ಕುಂಚಾವರಂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಣಕಯಂತ್ರ ಶಿಕ್ಷಕರನ್ನಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದರಿಂದ ಕುಂಚಾವರಂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಪಾಲಕರು ಮತ್ತು ಗ್ರಾಮಸ್ಥರಿಂದ ಧರ್ಮದೇಟು ತಿಂದು ಕುಂಚಾವರಂ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇವರ ಮೇಲೆ ಕೇಸ್ ಇನ್ನೂ ಕೋರ್ಟಿನಲ್ಲಿ ಚಾಲ್ತಿಯಲ್ಲಿ ಇರುವಾಗಲೇ ಅವರನ್ನು ಅಫಜಲಪುರ ತಾಲೂಕಿನ ಕರಜಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಸರಿಯಲ್ಲ. ಕೂಡಲೇ ಈ ಆದೇಶ ರದ್ದುಪಡಿಸಬೇಕು ಇಲ್ಲದಿದ್ದಲ್ಲಿ ಗ್ರಾಮಸ್ಥರು ಪಾಲಕರು ಸಂಘಟನೆಯವರು ಸೇರಿಕೊಂಡು ಶಾಲೆಗೆ ಬೀಗ ಹಾಕಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕರಜಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಮೇಶ ಅಚಲೇರಿ ನಾಗೇಶ್ ಗಡದೆ ಚಂದ್ರಕಾಂತ್ ಶೇಷಗಿರಿ ಸೈಫಾನ್ ಮುಲ್ಲಾ ಉಮೇಶ್ ಕರಜಿಗಿ ಮಾದೇವ ಬಂಕಲಗಿ ಷಡಕ್ಷರಿ ಹಿರೇಮಠ್ ಗುಂಡಪ್ಪ ಯಮಗಾರ್ ಭಗವಂತ ಕರೋಟಿ ಇನ್ನಿತರ ಉಪಸ್ಥಿತರಿದ್ದರು.