
ಭಾಲ್ಕಿ :ಮೇ.1:ಹೀರೆಮಠದ ಆವರಣದಲ್ಲಿ ನಡೆಯುವ ಗುರುಪ್ರಸಾದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗಣಕಯಂತ್ರ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಲಾಯಿತು. ಈ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಆಧುನಿಕ ಜ್ಞಾನದ ಸೌಲಭ್ಯವನ್ನು ಒದಗಿಸುವ ಕಾರಣದಿಂದ ಈ ಪ್ರಯೋಗಾಲಯ ಪ್ರಾರಂಭ ಮಾಡಿದ್ದೇವೆ. ಮಕ್ಕಳು ಗಣಕಯಂತ್ರ ಕಲಿಯುವ ಮೂಲಕ ಅಧುನಿಕ ಜಗತ್ತಿನ ಜೊತೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಕನ್ನಡ ಮಾಧ್ಯಮದ ಶಾಲೆಯ ಮಕ್ಕಳಲ್ಲಿ ಅಧುನಿಕ ಜ್ಞಾನದ ಸಂಪಾದನೆಗಾಗಿ ಗಣಕಯಂತ್ರದ ಸಾಕ್ಷರತೆಯನ್ನು ಮಕ್ಕಳಲ್ಲಿ ಮೂಡಿಸುವ ಸದ್ಭಾವ ನಮ್ಮದಾಗಿದೆ. ಈ ಶಾಲೆಯಲ್ಲಿ ಕಲಿಯುವ ಮಕ್ಕಳು ಅತ್ಯಂತ ಕಡುಬಡತಮದಿಂದ ಬಂದವರಾಗಿರುತ್ತಾರೆ. ಅವರಲ್ಲಿ ಅಧುನಿಕ ಜ್ನಾನದ ಕೊರತೆ ಇರುತ್ತದೆ. ಅವರು ಸ್ಪರ್ಧಾ ಜಗತ್ತಿನಲ್ಲಿ ಹಿಂದುಳಿಯಬಾರದು ಎಂದು ಈ ಪ್ರಯೋಗಾಲಯ ಉದ್ಘಾಟನೆಯಾಗುತ್ತಿರುವುದು ನಮಗೆ ಸಂತೋಷವಾಗಿದೆ ಎಂದು ನುಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಶ್ರೀ ಮಹಾಳಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಉದ್ಘಾಟನೆಯನ್ನು ಶರಣೆ ಶುಭಾಂಗಿ ಚನ್ನಬಸವಣ್ಣ ಬಳತೆ ಇವರಿಂದ ನೆರೆವೆರಿತು. ಪ್ರಶಾಂತರೆಡ್ಡಿ, ಶಿವಾನಂದ ಕಟ್ಟೆ, ಬಸವಪ್ರಣವ ಉಪಸ್ಥಿತರಿದ್ದರು, ಬಾಬು ಬೆಲ್ದಾಳ ಸ್ವಾಗತಿಸಿದರು. ಸವಿತಾ ಭೂರೆ ನಿರೂಪಿಸಿದರು. ಶಾಲಾ ಮಕ್ಕಳಿಂದ ವಚನ ಗಾಯನ ಜರುಗಿತು. ಗಣಕಯಂತ್ರ ದಾಸೋಹವನ್ನು ಭಾಲ್ಕಿ ಹಿರೇಮಠದ ಹಳೆಯ ವಿದ್ಯಾರ್ಥಿಯಾದಂತಹ ಧಾರವಾಡದ ವಿರೇಂದ್ರ ಬೂದಣ್ಣನವರು ಮಾಡಿದರು.