ಗಣಕಯಂತ್ರ ಪ್ರಯೋಗಾಲಯಗಳ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿ, ಆ 5: ಉನ್ನತ ಭಾರತ ಅಭಿಯಾನ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಅವಸರ ಲೀಡರ್‍ಶಿಪ್ ಫೌಂಡೇಶನ್, ಬೆಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಉ.ಭಾ.ಅ ದತ್ತು ಗ್ರಾಮವಾದ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ದುಮ್ಮವಾಡ, ಜೋಡಳ್ಳಿ ಹಾಗೂ ಗಂಭ್ಯಾಪೂರ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಗಣಕಯಂತ್ರ 4 ಪ್ರಯೋಗಾಲಯಗಳ ಉದ್ಘಾಟನಾ ಕಾರ್ಯಕ್ರಮವನ್ನು ಸ.ಹಿ.ಪ್ರಾ. ಶಾಲೆ, ಕುರುವಿನಕೊಪ್ಪದಲ್ಲಿ ಹಮ್ಮಿಕೊಳ್ಳಲಾಯಿತು.
ಕವಿವಿ ಸಿಂಡಿಕೇಟ್ ಸದಸ್ಯರಾದ ಡಾ. ಕಲ್ಮೇಶ ಹಾವೇರಿಪೇಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುರುವಿನಕೊಪ್ಪ ಗ್ರಾಪಂ ಅಧ್ಯಕ್ಷರಾದ ಬಸವರಾಜ ಬ. ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಕವಿವಿ ಧಾರವಾಡ ಕುಲಸಚಿವರಾದ ಯಶ್‍ಪಾಲ್ ಕ್ಷೀರಸಾಗರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ದಾನಿಗಳಾದ ಸತ್ಯಲಕ್ಷ್ಮೀ, ಹಿರಿಯ ವ್ತವಸ್ಥಾಪಕರು, ಅವಸರ ಲೀಡರ್‍ಶಿಪ್ ಫೌಂಡೇಶನ್, ಬೆಂಗಳೂರು, ರವರು ಉಪಸ್ಥಿತರಿದ್ದರು.