ಗಡ್ಡೆಸಗೂರ: ಕೋವಿಡ ಲಸಿಕೆ ಅಭಿಯಾನ ಯಶಸ್ವಿ

ಯಾದಗಿರ,ಜೂ.6- ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸಗೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೋವಿಡ ಲಸಿಕಾ ಅಭಿಯಾನದಲ್ಲಿ ಸರಿಸುಮಾರು 200 ಜನರಿಗೆ ಲಸಿಕೆ ಹಾಕಲಾಯಿತು.
ಹಾಲಗೇರಾ ಗ್ರಾಮ ಪಂಚಾಯತ ಹಾಗೂ ಕುರಕುಂದಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 18 ವರ್ಷ ಮೆಲ್ಪಟ್ಟರಿಗೆ ಕೊವಿಡ್ ಲಸಿಕಾ ಅಭಿಯಾನಕ್ಕೆ ಪಿಡಿಓ ಮಲ್ಲಿಕಾರ್ಜುನ ಸಜ್ಜನ ಚಾಲನೆ ನೀಡಿದರು.
ಮಹಾಮಾರಿ ಕೋರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರು ಕಡ್ಡಾಯವಾಗಿ ಕೋವಿಡ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಕೋವಿಡ ಮಾರ್ಗಸೂಚಿಯನ್ನು ಅನುಸರಿಸುವಂತೆ ಎಂದು ಅವರು ಕರೆ ನೀಡಿದರು.
ಆರೋಗ್ಯ ಸಿಬ್ಬಂದಿಗಳಾದ ರಾಜಶೇಖರ ಸಜ್ಜನ, ಸಿದ್ದು ಮೊಟಗಿ, ಆಶಾ ಕಾರ್ಯಕರ್ತೆ ವಾಹೇದಾ ಬೇಗಣ, ಶಂಕರಲಿಂಗಮ್ಮ ಮತ್ತು ಖಾಜಾ ಮೈನುದ್ದೀನ ಸೇರಿದಂತೆ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.