ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದ ಕಾಂಗ್ರೆಸ್ಸಿಗರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.04: ನಗರದ ಗುರು ಪಂಕ್ಷನ್ ಹಾಲ್ ನಲ್ಲಿ ಇಂದು ಮಧ್ಯಾಹ್ನ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ  ಪೂರ್ವಭಾವಿ ಸಭೆ ಇಂದು ಬೆಳಿಗ್ಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ಸಭೆ ನಡೆಯಿತು.
ಸಭೆಯು ಎಐಸಿಸಿಯ ಸದಸ್ಯರು ಮತ್ತು ಕಲ್ಯಾಣ ಕರ್ನಾಟಕ ಉಸ್ತುವಾರಿ ಶ್ರೀಧರ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಜಿ.ಎಸ್. ಮೊಮ್ಮದ್ ರಫೀಕ್, ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಎಂ.ದಿವಾಕರಬಾಬು, ಮಾಜಿ ಶಾಸಕ ಅನಿಲ್ ಲಾಡ್, ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಜಿಪಂ ಮಾಜಿ ಸದಸ್ಯರಾದ  ಅಲ್ಲಂ ಪ್ರಶಾಂತ್, ನಾರಾ ಭರತ್ ರೆಡ್ಡಿ ಮತ್ತು ಸುನೀಲ್ ರಾವೂರ,  ಮತ್ತಿತರರು, ಪಕ್ಷದ  ಹಿರಿಯ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಆಯೋಜನೆ ಮತ್ತು ಯಶ್ವಿಗೊಳಿಸುವ ಬಗ್ಗೆ ಮಾತುಕತೆ ನಡೆಸಲಾಯಿತು.
ಮಧ್ಯಾಹ್ನ ಸಭೆ ಇದ್ದರೆ ಬೆಳಿಗ್ಗೆ ಪೂರ್ವ ಭಾವಿ ಸಭೆ ನಡೆಸಿದ್ದು ಒಂದು ರೀತಿ ಗಡ್ಡಕ್ಕೆ ಬೆಂಕಿ ಹತ್ತಿದಾಗ  ನೀರಗಾಗಿ ಬಾವಿ ತೋಡಿದಂತೆ ಇತ್ತು.