ಗಡಿ ಸಹಜ ಸ್ಥಿತಿಗೆ ಶಾಂತಿ ಅಗತ್ಯ ಸ್ಟಮಕ್-ಚೀನಾಕ್ಕೆ ಭಾರತ ತಾಕೀತು

ನವದೆಹಲಿ,ಏ.೭- ಚೀನಾದೊಂದಿಗಿನ ಸಂಬಂಧ ಸಹಜ ಸ್ಥಿತಿಗೆ ಮರಳಲು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಮರುಸ್ಥಾಪನೆಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.
ಚೀನಾದೊಂದಿಗೆ ಸಂಬಂಧ ಉತ್ತಮವಾಗಬೇಕಾದರೆ ಗಡಿ ಪ್ರದೇಶಗಳಲ್ಲಿ ಶಾಂತಿ ಅಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಪೂರ್ವ ಲಡಾಖ್‌ನ ಘರ್ಷಣೆಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಅದು ಸರಿ ಹೊಂದಬೇಕಾದರೆ ಗಡಿ ಭಾಗದಲ್ಲಿ ಶಾಂತಿ ಕಾಪಾಡುವುದು ಮುಖ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚೀನಾಕ್ಕೆ ನೇರವಾಗಿ ಎಚ್ಚರಿಕೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯೆ ನೀಡಿ ಸಂಬಂಧದಲ್ಲಿ ಸಹಜ ಪರಿಸ್ಥಿತಿ ಮರುಸ್ಥಾಪಿಸಲು ಏಪ್ರಿಲ್ ೨೦೨೦ನಿಂದ ತೊಂದರೆಗೊಳಗಾದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆ ಅಗತ್ಯವಿರುತ್ತದೆ” ಎಂದು ಹೇಳಿದ್ದಾರೆ.
ಎಸ್‌ಸಿಒ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಮಂತ್ರಿಗಳ ಸಭೆಗೆ ಮುಂಚಿತವಾಗಿ ಈ ಟೀಕೆಗಳು ಬಂದಿವೆ. ಇದರಲ್ಲಿ ಚೀನಾದ ಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ.
ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಚೀನಾದ ರಾಜತಾಂತ್ರಿಕರ ಟೀಕೆಗಳ ಕುರಿತ ಪ್ರಶ್ನೆಗೆ ಬಾಗ್ಚಿ ಈ ಹೇಳಿಕೆ ನೀಡಿದ್ದಾರೆ.
“ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದಂತೆ, ಒಪ್ಪಂದಗಳಿಗೆ ವಿರುದ್ಧವಾಗಿ ಗಡಿ ಭಾಗದಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗದ ಕುರಿತು ಚರ್ಚೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿಯು ಶಾಂತಿ ಮತ್ತು ನೆಮ್ಮದಿಗೆ ಮರಳುವವರೆಗೆ, “ಒಟ್ಟಾರೆ ಸಂಬಂಧದಲ್ಲಿ ಸಹಜತೆಯನ್ನು ನಾವು ಊಹಿಸಲು ಸಾಧ್ಯವಿಲ” ಎಂದು ಹೇಳಿದ್ದಾರೆ.
ಚೀನಾದಲ್ಲಿ ಭಾರತೀಯ ಪತ್ರಕರ್ತರ ನಿರಂತರ ಉಪಸ್ಥಿತಿಗೆ ಚೀನಾ ಅಧಿಕಾರಿಗಳು ಅನುಕೂಲ ಮಾಡಿಕೊಡುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
“ಪತ್ರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಭಾರತೀಯ ವೀಸಾಗಳನ್ನು ಹೊಂದಿರುವ ಚೀನಾದ ಪತ್ರಕರ್ತರು ಭಾರತದಲ್ಲಿ ಇದ್ದಾರೆ” ಎಂದು ಹೇಳಿದ್ದಾರೆ.