ಗಡಿ ಭಾಗದ ಕನ್ನಡ ಪ್ರೇಮಿ, ದಾಸ ಸಾಹಿತ್ಯ ಪರಿಷತ್ ಹುಟ್ಟು ಹಾಕಿದ ಬೇರು ಬಿ.ಎಮ್ ಅಮರವಾಡಿಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸಾರಥಿ

ಔರಾದ:ಡಿ.24: ರಾಜ್ಯದ ಗಡಿ ಭಾಗದ ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿರುಚಿ ಹುಟ್ಟಿಸಿ ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ ಹಾಗೂ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದಾಸ ಸಾಹಿತ್ಯ ಬೆಳಕಿಗೆ ತರುವ ಮೂಲಕ ದಾಸ ಸಾಹಿತ್ಯ ಪರಿಷತ್ ಹುಟ್ಟು ಹಾಕಿದ ಯುವ ಉತ್ಸಾಹಿ, ಆದರ್ಶ ಶಿಕ್ಷಕ ಬಿ.ಎಮ್ ಅಮರವಾಡಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಗಡಿ ಭಾಗದ ಜನರಲ್ಲಿ ಸಂತಸ ಉಂಟು ಮಾಡಿದೆ.

ಬಿ.ಎಮ್ ಅಮರವಾಡಿ ಅವರು ಮೂಲತಃ ಔರಾದ ಪಟ್ಟಣದ ನಿವಾಸಿಯಾಗಿದ್ದು ಬಾಲ್ಯದಿಂದಲೇ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಅನೇಕ ಕವನ ಕಥೆ ಗಳನ್ನು ರಚಿಸುವ ಹವ್ಯಾಸ ಹೊಂದಿರುವವರು, ಸರಳತೆ ಸಕಾರ ಮೂರ್ತಿ ದಾಸರ ಚಿಂತನೆಗಳನ್ನು ಮೈಗೂಡಿಸಿಕೊಂಡು ದಾಸ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ, ವೃತ್ತಿಯಲ್ಲಿ ಶಿಕ್ಷಕರಾದರು ಮಕ್ಕಳನ್ನು ಪ್ರೀತಿಯಿಂದ ಕಾಣುವ ಅವರ ಸ್ವಭಾವ ಎಲ್ಲರೂ ಮೆಚ್ಚುವಂತಹದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೆ ಮೊದಲ ಬಾರಿಗೆ ದಾಸ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದು ಅದರಲ್ಲಿ ವಿಶೇಷವಾಗಿ ದಾಸ ಸಾಹಿತ್ಯದ ಬೇರು ಬಿ.ಎಮ್ ಅಮರವಾಡಿ ಅವರಿಗೆ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ನೀಡಿದ್ದು ಗಡಿ ಭಾಗದ ಕನ್ನಡಿಗರಿಗೆ ಇಲ್ಲಿನ ಶಿಕ್ಷಕ ವೃಂದಕ್ಕೆ ಸಂತಸ ತಂದಿದೆ.


ಮಾದರಿ ಶಿಕ್ಷಕ :

2008ರಲ್ಲಿ ತಾಲೂಕಿನ ಕರಂಜೆ ಗ್ರಾಮದಲ್ಲಿ ಸೇವೆಯನ್ನು ಆರಂಭೀಸಿದ ಅಮರವಾಡಿ ಕರಂಜಿ ಗ್ರಾಮವೂ ತೆಲಗಾಂಣ ರಾಜ್ಯದ ಪಕ್ಕದ ಹಳ್ಳಿಯೇ ಆಗಿರುವ ಹಿನ್ನಲೆಯಲ್ಲಿ ಅಲ್ಲಿನ ಬಹುತೇಕ ಜನರು ತೆಲುಗು ಭಾಷೆಯಲ್ಲಿ ಮಾತನಾಡುವರಿದ್ದರು ಅಲ್ಲಿನ ಪಾಲಕರಿಗೆ ಹಾಗೂ ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವನ್ನು ತಿಳಿಸಿ ಕನ್ನಡ ಭಾಷೆಯ ಮಾತಾಡುವಂತೆ ಹಾಗೂ ಪ್ರತಿಯೊಬ್ಬರು ಕಡ್ಡಾಯವಾಗಿ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಭೋಧನೆ ಮಾಡುವಂತೆ ತಿಳಿ ಹೇಳಿದರು. ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜೋತೆಗೆ ಕಲೆ ಸಾಹಿತ್ಯದ ಅಭಿರುಚಿಯನ್ನು ಪಸರಿಸಿದರು.ಅದರಂತೆ ಪ್ರಸ್ತುತ ತಾಲೂಕಿನ ಎಕಲಾರ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಎಮ್ ಅರಮವಾಡಿ ಅವರು ಸದಾ ಅಲ್ಲಿನ ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪಣ ತೊಟ್ಟು ಅಲ್ಲಿನ ಮಕ್ಕಳಿಗೆ ಪೂರಕವಾಗಿರುವ ಸಲಕರಣೆಗಳನ್ನು ದಾನಿಗಳ ಮೂಲಕ ಒದಗಿಸಿ ಖಾಸಗಿ ಶಾಲೆಗಿಂತ ನಾವು ಕಮ್ಮಿಯಿಲ್ಲ ಎನ್ನುವಂತೆ ಮಾದರಿ ಕಾರ್ಯಕ್ರಮ ಮಾಡುವ ಮೂಲಕ ಶಾಲೆಗೆ ತಾಲೂಕು, ಜಿಲ್ಲಾ ಮಟ್ಟದ ಹಾಗೂ ವಿಭಾಗೀಯ ಅಧಿಕಾರಿಯನ್ನು ಶಾಲೆಯ ಆಡಳಿತವೈಖರಿಯನ್ನು ನೋಡಿ ಕೊಂಡಾಡಿದ್ದಾರೆ.


ಸಾಹಿತ್ಯ ಕ್ಷೇತ್ರಕ್ಕೆ ಏಂಟ್ರೀ :

ರಾಜ್ಯದಲ್ಲಿನ ಬಹುತೇಕ ಸಂಘಟನೆಗಳು ದಕ್ಷೀಣ ಕನ್ನಡ ಭಾಗದಲ್ಲಿ ಜನ್ಮ ತಾಳಿ ಹಂತ ಹಂತವಾಗಿ ಬೆಳೆದುಕೊಂಡು ಉತ್ತರ ಕರ್ನಾಟಕ್ಕೆ ಕಾಲಿಡುತ್ತವೆ ಆದರೆ ಬೀದರ ಜಿಲ್ಲೆಯ ಇತಿಹಾಸದಲ್ಲಿಯೇ ಮೋದಲ ಬಾರಿಗೆ 2009ರಲ್ಲಿ ರಾಜ್ಯ ಮಟ್ಟದ ದಾಸ ಸಾಹಿತ್ಯ ಪರಿಷತನ್ನು ಹುಟ್ಟು ಹಾಕಿ ದಾಸರ ಸಂದೇಶಗಳನ್ನು ನಿರಂತರವಾಗಿ ಪ್ರಚಾರ ಮಾಡಿ ಜಿಲ್ಲೆಯಿಂದ ಜಿಲ್ಲೆಗೆ ಹರಡಿ ರಾಜ್ಯಾದ್ಯಂತ ಸಂಸ್ಥೆಯಿಂದ ಉತ್ತಮ ಕೆಲಸಗಳು ಮಾಡಿ ಹೆಮ್ಮೆರವಾಗಿ ಬೆಳೆಸಿದ ಕಿರ್ತಿ ಏಕಾಂಗಿ ಅಮರವಾಡಿಗೆ ಸಲ್ಲುತ್ತದೆ.


ಕೋವಿಡ್‍ನಲ್ಲಿಯೂ ಶುರುವಾಯ್ತು ಕನಕ ಓದು :

2009ರಿಂದ ನಿರಂತರವಾಗಿ ಶಾಲೆ ರಜೆ ಅವಧಿಯಲ್ಲಿ ಹಾಗೂ ಬಿಡುವಿನ ಸಮಯದಲ್ಲಿ ಕೆಲಸಗಳು ಮಾಡಿ 2019ರಲ್ಲಿ ಕೋವಿಡ್ ಮಹಾ ಮಾರಿಯ ಸಮಯದಲ್ಲಿ ಕನಕ ಓದು ಎನ್ನುವ ಕಾರ್ಯಕ್ರಮದ ಆನ್‍ಲೈನ್ ಮೂಲಕ ಕನಕರ ಸಂದೇಶಗಳನ್ನು ನಾಡಿನ ಜನತೆಗೆ ತಿಳಿಸುವಂತ ಕೆಲಸವು ಮಾಡಿರುವ ಕಿರ್ತಿ ಅಮರವಾಡಿಗೆ ಸಲ್ಲುತ್ತದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಿಂದ ಜಿಲ್ಲೆಯಲ್ಲಿ ಡಿ 30ರಂದು ನಡೆಯಲ್ಲಿರುವ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕ ಬಿಎಮ್ ಅಮರವಾಡಿಯನ್ನು ಆಯ್ಕೆ ಮಾಡಿರುವುದು ಗಡಿ ನಾಡಿನ ಸಂಘ ಸಂಸ್ಥೆಯ ಮುಖಂರಿಗೂ ಶಾಲೆಯ ಶಿಕ್ಷಕರಿಗೂ ಖುಷಿಯನ್ನು ಉಂಟು ಮಾಡಿದೆ. ಶಿಕ್ಷಕರು ಮಕ್ಕಳಿಗೆ ಭೋದನೆ ಮಾಡುವುದರ ಜೋತೆಗೆ ಮಾದರಿಯ ಕೆಲಸಗಳನ್ನು ಮಾಡಿರುವುದು ಕಸಾಪ ಗುರುತಿಸಿ ಸೂಕ್ತವೇದಿಕೆಯನ್ನು ನೀಡಿರುವುದು ಶಿಕ್ಷಕರಲ್ಲಿ ಹರ್ಷ ತುಂಬು ತುಳುಕುತ್ತಿದೆ. ನಮ್ಮ ವೃತಿಯ ಬಾಂಧವರು ಮಾಡಿರುವ ಒಳ್ಳೆಯ ಕೆಲಸವನ್ನು ನೋಡಿ ಕಸಾಪ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ನಮ್ಮ ಶಿಕ್ಷಕರ ಕೆಲಸವನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನಮ್ಮೆಲ್ಲ ಶಿಕ್ಷಕರಿಗೆ ಖುಷಿಯ ವಿಷಯವಾಗಿದೆ ಎಂದು ಶಿಕ್ಷಕರು ಕೊಂಡಾಡುತ್ತಿದ್ದಾರೆ.

ಅಧೂನಿಕ ಯುದಲ್ಲಿ ಸಂಘ ಸಂಸ್ಥೆಗಳು ಹಣವಂತರಿಗೆ ಹಾಗೂ ರಾಜಕೀಯ ಬೆಂಬಲ ಇರುವ ವ್ಯಕ್ತಿಗಳನ್ನು ಗುರುತಿಸಿ ಸುಕ್ತವಾದ ವೇದಿಕೆಯನ್ನು ನೀಡುತ್ತಿದೆ ಬಡ ಮಕ್ಕಳಲ್ಲಿ ಉತ್ತಮ ಪ್ರತಿಭೆಯನ್ನು ಇದ್ದರೂ ಅವರ ವೇದಿಕೆಯನ್ನು ಗುರುತಿಸುವಂತಹ ಕೆಲಸಗಳು ನಡೆಯುತ್ತಿಲ್ಲ ಎನ್ನುವುದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಸುಳ್ಳಾಗಿಸಿ ಉತ್ತಮ ವ್ಯಕ್ತಿಯನ್ನು ಸುಕ್ತ ಸಮಯಕ್ಕೆ ಆಯ್ಕೆ ಮಾಡಿರುವುದು ಸಂತಸದ ವಿಷಯವಾಗಿದೆ ಎನ್ನುವುದು ಗಡಿನಾಡಿನಲ್ಲಿರುವ ಹಿರಿಯ ಸಾಹಿತಿಗಳ ಮನದಾಳದ ಮಾತಾಗಿದೆ.


ಸನ್ಮಾನದ ಸುರಿ ಮಳೆ:

ತಾಲೂಕು ಹಾಗೂ ಜಿಲ್ಲೆಯಲ್ಲಿ ಅನೇಕ ಸಮ್ಮೇಳನಗಳು ನಡೆದಿವೆ ಸಮ್ಮೇಳನಾಧ್ಯಕ್ಷರ ಆಯ್ಕೆ ಅಭಿನಂದನೆಗಳು ನಡೆದಿದೆ ಆದರೆ ಬಿಎಮ್ ಅಮರವಾಡಿ ಅವರಿಗೆ ನಿರಂತರವಾಗಿ ತಾಲೂಕು ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸನ್ಮಾನದ ಮಹಾಪೂರವನ್ನೇ ಮಾಡಲಾಗುತ್ತಿದೆ.ಮಾಜಿ ಸಚಿವ ಹಾಲಿ ಶಾಸಕ ಪ್ರಭು ಚವ್ಹಾಣ,ಭಾಲ್ಕಿ ಹಿರೇಮಠ ಸಂಸ್ಥಾದ ಪಿಠಾಧಿಪತಿಗಳು,ಕನ್ನಡ ಸಾಹಿತ್ಯ ಪರಿಷತ್, ತಾಲೂಕಿನ ಪತ್ರಕರ್ತರು, ಕರ್ನಾಟಕ ರಕ್ಷಣಾ ವೇದಿಕೆ,ಅನುದಾನ ರಹಿತ ಶಾಲೆ ಶಿಕ್ಷಕರ ಸಂಘ ಹಾಗೂ ಆಡಳಿತ ಮಂಡಳಿ ಸದಸ್ಯರು, ಬಸವ ಬಳಗ, ತಹಶೀಲ್ದಾರ ಮಲ್ಲಶೆಟ್ಟಿ ಚಿದ್ರೆ, ತಾಲೂಕು ಗೊಂಡ ಕುರುಬ ನೌಕರ ಸಂಘ,ಕನಕ ಯುವ ಸೇನೆ,ತಾಲೂಕು ಗೊಂಡ ಸಮಾಜ,ಭಾರತೀಯ ಬಸವ ಬಳಗ,ಎಸಿ ಎಸ್ಟಿ ನೌಕರ ಸಂಘ,ಭಾರತೀಯ ಬೌಧ ಮಹಾ ಸಭಾ,ಸಂಗೋಳಿ ರಾಯಣ್ಣ ಯುವ ಒಕ್ಕೂಟ,ಗೊಂಡ ನೌಕರ ಸಂಘ ಭಾಲ್ಕಿ,ಕಲ್ಯಾಣ ಕರ್ನಾಟಕ ಗೊಂಡ ಪರ ಸಂಘಟನೆಯ ಒಕ್ಕೂಟ, ಭಾಲ್ಕಿ ಕಸಾಪ ತಂಡ, ಶ್ರೀ ಷ.ಬೃ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹಣೇಗಾಂವ, ಸರ್ಕಾರಿ ನೌಕರ ಸಂಘ,ಪ್ರೌಢಶಾಲೆ ಶಿಕ್ಷಕರ ಸಂಘ,ಪ್ರಾಥಮೀಕ ಶಾಲೆ ಶಿಕ್ಷಕರ ಸಂಘ,ಎನ್.ಪಿ.ಎಸ್ ನೌಕರರ ಸಂಘ, ಮರಾಠಿ ಶಿಕ್ಷಕರ ಸಂಘ, ವಾರಕಾರಿ ಭಜನ ಮಂಡಳಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದಿಸಿ ಗೌರವಿಸಿದ್ದಾರೆ.