ಶಹಾಪೂರ:ಎ.2:ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡದ ಚಟುವಟಿಕೆಗಳು ಹೆಚ್ಚು-ಹೆಚ್ಚಾಗಿ ಸಂಘÀಟಿಸುವ ಮೂಲಕ ಗಡಿ ಭಾಗದಲ್ಲಿ ಕನ್ನಡದ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಕೆಂಭಾವಿ ಹಿರೇಮಠದ ಪೂಜ್ಯ ಶ್ರೀ ಚನ್ನಬಸವ ಶಿವಾಚಾರ್ಯರು ಹೇಳಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ನವೋದಯ ಸಾಂಸ್ಕೃತಿಕ ಯುವಕ ಸಂಘ ಕನ್ನೆಕೊಳೂರು ಸಹಯೋಗದೊಂದಿಗೆ ಶಹಾಪೂರ ತಾಲೂಕಿನ ರಸ್ತಾಪೂರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗಡಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಗಡಿಭಾಗದ ಜಿಲ್ಲೆಗಳಲ್ಲಿ ಈ ರೀತಿಯ ಕನ್ನಡ ಭಾಷಭಿಮಾನ ಮತ್ತು ಸಾಂಸ್ಕೃತಿಕ ಆಸಕ್ತಿ ಬೆಳೆಸುವ ಚಟುವಟಿಕೆಗಳು ವರ್ಷದೂದ್ದಕ್ಕು ಆಯೋಜಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಸ್ವಾತಂತ್ಯ್ರದ ಅಮೃತ ಮಹೋತ್ಸವ ಪ್ರಯುಕ್ತ ಗಡಿ ಪ್ರಾಧಿಕಾರ ವರ್ಷವೀಡಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ಅದರ ಭಾಗವಾಗಿ ಗಡಿಭಾಗದ ಎಲ್ಲಾ ಜಿಲ್ಲೆ ಹಾಗೂ ತಾಲೂಕಗಳಲ್ಲಿ ಗಡಿ ಸಾಂಸ್ಕೃತಿಕ ಉತ್ಸವ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿಧ ಶಿವಪ್ಪ ಹೆಬ್ಬಾಳ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ನಿಲಪ್ಪ ಚೌದರಿ, ಬಸವಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ. ರೆವಮ್ಮ ಎಸ್ ಹೆರುಂಡಿ, ಉಪನ್ಯಾಸಕ ಬಲಭೀಮ ಪಾಟೀಲ್ ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಇತರರಿದ್ದರು, ಸಂಸ್ಥೆಯ ಅಧ್ಯಕ್ಷ ಅಯ್ಯಣಗೌಡ ಪೆÇೀಲಿಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು, ಜ್ಯೋತಿ ಸಂಗಡಿಗರು ಪ್ರ್ರಾರ್ಥಿಸಿದರು, ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಪ್ರವೀಣ ಜಕಾತಿ ಸ್ವಾಗತಿಸಿದರು, ಮಹೇಶ ಜಾಲಿಬೆಂಚಿ ವಂದಿಸಿದರು. ಇದೇ ಸಂದರ್ಭದಲ್ಲಿ ದೇವಮ್ಮ ಚಂದ್ರಮ್ಮ ಸಂಗಡಿಗರು ಕೋಡೆಕಲ್ ಅವರಿಂದ ಸಂಪ್ರದಾಯದ ಹಾಡುಗಳು ಹಾಗೂ ಆಕಶವಾಣಿ ಕಲಾವಿಧರಾದ ಬಲವಂತಪ್ಪ ವಿಶ್ವಕರ್ಮ, ಮಲ್ಲಿಕಾರ್ಜುನ ಹೂಗಾರ, ಯಲ್ಲಪ್ಪ ಮಾಸ್ಟರ್, ಬಸವರಾಜ ಜಾಯಿ ಸಂಗಡಿಗರಿಂದ ಜನಪದ ಗಾಯನ, ಬೀರಲಿಂಗಪ್ಪ ಮಂಜಲಾಪುರ ಮತ್ತು ತಂಡದವರಿಂದ ಡೊಳ್ಳು ಕುಣಿತ ಪ್ರದರ್ಶನ, ಬಸವರಾಜ ವನದುರ್ಗ ಮತ್ತು ತಂಡದವರಿಂದ ಕರಡಿ ಮಜಲು ಪ್ರದರ್ಶನ, ಮತ್ತು ಸ್ಥಳಿಯ ಬಸವಶ್ರೀ ಪ್ರಾಥಮಿಕ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭದಲ್ಲಿ ಜನರನ್ನು ರಂಜಿಸಿದವು.