ಗಡಿ ಭಾಗದಲ್ಲಿ ನಾಕಾ ಬಂದಿ ಹಾಕಿ ಅಂತರ್ ರಾಜ್ಯದಿಂದ ಬರುವರಿಗೆ ತಪಾಸಣೆ ಮಾಡಿ:ಯಶವಂತರಾಯಗೌಡ ಪಾಟೀಲ

ಇಂಡಿ;ಎ.29: ಇಂದು ಗುರುವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಅಧ್ಯಕ್ಷತೆಯಲ್ಲಿ ಕೋವಿಡ್ -19 ರೋಗದ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕರೋನಾ ಮಹಾಮಾರಿ 2ನೇ ಅಲೆ ಇಡೀ ದೇಶದಲ್ಲಿ ವ್ಯಾಪಿಸಿದ್ದು ರಾಜ್ಯ ಅಷ್ಠೇ ಅಲ್ಲಾ ಗ್ರಾಮೀಣ ಭಾಗದಲ್ಲಿಯೂ ಕೂಡಾ ವಕ್ಕರಿಸಿದೆ ಇಂತಹ ಸಂದ್ಗಿದ ಪರಸ್ಥಿತಿಯಲ್ಲಿ ಜನತೆಯ ಜೀವ ಕಾಪಾಡುವುದು ಪ್ರಮುಖವಾಗಿದೆ ತಾಲೂಕಾ ಆಡಳಿತ ನಿಮ್ಮ ಕ್ರಮಗಳ ಬಗ್ಗೆ ಸಭೆಯಲ್ಲಿ ತಿಳಿಸಿ ಎಂದು ತಹಶೀಲ್ದಾರ ಚಿದಾನಂದ ಕುಲಕರ್ಣಿಯವರಿಗೆ ಶಾಸಕರು ಪ್ರಶ್ನಿಸಿದರು.
ಈಗಾಗಲೆ ತಾಲೂಕಿನಾದ್ಯೆಂತ ಯಾವುದೇ ಜಾತ್ರೆಗಳು ನಡೆಯಕೂಡದು ಹಾಗೂ ಮದುವೆಗಳಲ್ಲಿ ಕೇವಲ 50 ಜನರು , ತಿರಿಕೊಂಡರೆ 5 ಜನರನ್ನು ಮಾತ್ರ ಸೇರಿಸಬೇಕು ಎಂದು ಸರಕಾರದ ಸುತೋಲೆ ಹೋರಡಿಸಲಾಗಿದ್ದು ಪ್ರತಿಯೊಂದು ಗ್ರಾಮಗಳಲ್ಲಿ ನೋಡಲ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದು ಶಾಸಕರಿಗೆ ತಹಶೀಲ್ದಾರ ತಿಳಿಸಿದರು.
ನಂತರ ಶಾಸಕರು ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕ್ರೀಯ ಕೋವಿಡ್ ಪ್ರಕರಣಗಳೇಷ್ಟು ? ಕೋವಿಡ್ ಸಹಾಯವಾಣಿ ,ಕೋವಿಡ್ ಕಂಟ್ರೋಲ್ ರೋಮ್ ತೆರೆಯಲಾಗಿದೆಯೇ ಪ್ರಶ್ನಿಸಿದಾಗ ಈಗಾಗಲೆ 396 ಸಕ್ರೀಯ ಪ್ರಕರಣಗಳಿದ್ದು 36 ಜನ ಆಕ್ಸೀಜನ್‍ನಲ್ಲಿದ್ದಾರೆ ಎಂದು ಡಾ. ರಾಜಶೇಖರ ಕೋಳೆಕರ್ ತಿಳಿಸಿದರು.
ಕೋವಿಡ್ -19 ಸಂಭಂದಿಸಿದ ಉಪಕರಣಗಳು ಮತ್ತು ವೈದ್ಯಕೀಯ ಎನ್ನನ್ನಾದರೂ ಬೇಡಿಕೆ ಇದ್ದರೆ ಲಿಸ್ಟ್ ತಯಾರಿಸಿ ಕೊಡಿ ಎಂದು ಶಾಸಕ ಪಾಟೀಲ ತಿಳಿಸಿದಾಗ ರೇಮಿಡಿಸಿವರ್ ಇಂಜೇಕ್ಸನ್ ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲು ಹಾಗೂ ವೆಂಟೀಲಿಟರ್ ಆಕ್ಸಿಜನ್ ಆಪ್‍ರೇಟ ಮಾಡುವುದಕ್ಕೆ ಸಿಬ್ಬಂದಿಗಳಿರುವುದಿಲ್ಲ ಭರ್ತಿಮಾಡಲು ಕ್ರಮಕೈಗೋಳ್ಳಿ ಸರ್ ಎಂದಾಗ ಕೂಡಲೆ ತಗೆದುಕೊಳ್ಳಿ ಇಂತಹ ಕಷ್ಟದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಕೂಡಾ ಕೈಜೋಡಿಸಬೇಕೆಂದರು. ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ಕರೆಯಲು ತಿಳಿಸಿದರು.
ಇಂಡಿ ಪಟ್ಟಣದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಭಯವನ್ನು ಹೋಗಲಾಡಿಸಿ ಜನರು ಯಾವುದೇ ಭಯಕ್ಕೆ ಒಳಗಾಗದೆ ಜಾಗೃತಿಯಿಂದ ಇರಬೇಕು ಎಂದು ತಿಳಿಸಿ . ಗಡಿ ಭಾಗದಲ್ಲಿ 7 ಚೆಕ್ಕ ಪೋಸ್ಟ ಮಾಡಿ ಅಂತರ್ ರಾಜ್ಯಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಿ. ಕೃಷಿ ಚಟುವಟಿಕೆ, ಕಟ್ಟಡ ಕಾರ್ಮಿಕರು ಕೋವಿಡ್ ಆದ್ಯೆತೆ ಮೇರೆಗೆ ಅವರ ದೈನಂದಿನ ಕೆಲಸಗಳಿಗೆ ತೊಂದರೆ ಮಾಡಬೇಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ವಾರ್ಡಗಳ ಸ್ವಚ್ಛತೆ . ಪ್ರತಿ ವಾರ್ಡಗಳಲ್ಲಿ ಸ್ಯಾನಿಟೈಜರ್ ಮಾಡಲಾಗಿದೆಯೇ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಇವರಿಗೆ ಶಾಸಕರು ಕೇಳಿದರು .ಸರ್ ಕಳೇದ ಒಂದು ವಾರದಿಂದ ಪ್ರತಿ ವಾರ್ಡಗಳಲ್ಲಿ ಸಂಚರಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು ನಮ್ಮ ಪೌರ ಕಾರ್ಮಿಕರು ಬೀಡುವು ಇಲ್ಲದೆ ದುಡಿಯುತ್ತಿದ್ದಾರೆ. ಸ್ಯಾನಿಟೈಜರ್ ಪ್ರತಿ ವಾರ್ಡಗಳಿಗೆ ಎರಡು ಬಾರಿ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗಿದೆ. ಜೌಗು ಪ್ರದೇಶದಲ್ಲಿ ಸೊಳ್ಳೆಗಳು ಆಗದಂತೆ ಪೌಡರ್ ಸಿಂಪಡಣೆ ಮಾಡಲಾಗಿದೆ . ಪಟ್ಟಣದಲ್ಲಿ 24*07 ಶುದ್ದ ಕುಡಿಯುವ ನೀರು ಪೂರೈಕೆ ಇರುವದರಿಂದ್ದ ನೀರಿನ ತೊಂದರೆ ಇಲ್ಲ ಎಂದು ಮುಖ್ಯಾಧಿಕಾರಿ ಉತ್ತರಿಸಿದರು,
ನಂತರ ಶಾಸಕ ಪಾಟೀಲ ಸದ್ಯ ಜನತೆ ಕಷ್ಟದಲ್ಲಿದ್ದಾರೆ ಪುರಸಭೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಿಂದ ತೊಂದರೆ ಕೊಡಬಾರದು. ಸಹಕಾರ ಮನೋಭಾವನೆಯಿಂದ ಜನರ ಕಷ್ಟದಲ್ಲಿ ಸಹಾಯ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮೀಣ ಭಾಗದಲ್ಲಿ ನೀರಿನ ತೊಂದರೆ ಇದ್ದರೆ ಟ್ಯಾಂಕರ ಮೂಲಕ ನೀರು ಒದಗಿಸಬೇಕು.
ತಾಲೂಕಿನಾದ್ಯೆಂತ ಪಿ.ಡಬ್ಲ್ಯೋ.ಡಿ ರಸ್ತೆಗಳ ಕಾಮಗಾರಿ ನಡೆದಿವೆ ಗುಣಮಟ್ಟದಾಗಿರಬೇಕು ಎಂದು ಅಧಿಕಾರಿ ದಯಾನಂದ ಮಠ ಇವರಿಗೆ ಶಾಸಕರು ಸೂಚಿಸಿದರು.

ಬಾಕ್ಸ: ಕೋವಿಡ್ ವ್ಯಾಕ್ಸಿನ್ ಪ್ರತಿಯೋಬ್ಬರಿಗೂ ತಲುಪುವಂತಾಗಬೇಕು. ಸಾರ್ವಜನಿಕರು ಕೋವಿಡ್ ಎರಡೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಸಾರ್ವಜನಿಕರು ಮನೆಯಲ್ಲಿ ಇರಬೇಕು ಸರಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮಾಸ್ಕ. ಸ್ಯಾನಿಟೈಜರ್, ಸಾಮಾಜಿಕ ಅಂತರವನ್ನು ಕಾಪಾಡಿ ರೋಗದ ವಿರುದ್ಧ ಹೋರಾಟ ಮಾಡಬೇಕು.ನಿರಾಶ್ರೀತರಿಗೆ ಉಳ್ಳವರು, ಧಾನಿಗಳು, ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡಿ ಎಂದು ಮನವಿ ಮಾಡಿದ್ದಾರೆ.

              ಶಾಸಕ ಯಶವಂತರಾಯಗೌಡ ಪಾಟೀಲ .

ತಹಶೀಲ್ದಾರ ಚಿದಾನಂದ ಕುಲಕರ್ಣಿ, ಡಿ,ವಾಯ್.ಎಸ್.ಪಿ, ಶ್ರೀಧರ ದೊಡ್ಡಿ, ಪಿ.ಆರ್.ಇ.ಡಿ ಅಧಿಕಾರಿ ಎಸ್.ಆರ್ ರುದ್ರವಾಡಿ, ಆರೋಗ್ಯಾಧಿಕಾರಿ ಡಾ. ರಾಜಶೇಖರ ಕೋಳೆಕರ್, ದಯಾನಂದ ಮಠ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಇದ್ದರು.