ಗಡಿ ಭಾಗದಲ್ಲಿ ಜಗಜ್ಯೋತಿ ಬಸವಣ್ಣನವರ ಮೂರ್ತಿಸ್ಥಾಪನೆ

ಭಾಲ್ಕಿ :ಮೇ.1: ತಾಲೂಕಿನ ಗಡಿಭಾಗದ ಕಾಸರತುಗಾವ ವಾಡಿ ಗ್ರಾಮದಲ್ಲಿ ಜಗಜ್ಯೋತಿ ಬಸವಣ್ಣನವರ ಮೂರ್ತಿಸ್ಥಾಪನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಭಾಲ್ಕಿ ಪರಮ ಪೂಜ್ಯ ಗುರುಬಸವ ಪಟ್ಟದೇವರು ಜಗಜ್ಯೋತಿ ಬಸವಣ್ಣನವರ ಮೂರ್ತಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರು ಯಾವುದೇ ಜಾತಿ, ಭೇದ, ಭಾವ ಅನ್ನಲ್ಲಾರದೇ, ಸ್ತ್ರೀ ಪುರುಷರಿಗೆ ಸಮಾನ ಅವಕಾಶವನ್ನು ಕೊಟ್ಟು, ಸಮಾಜದಲ್ಲಿ ಸಮಾನತೆ ಜಾರಿಗೆ ತಂದ ಏಕೈಕ ಗುರು ವಿಶ್ವಗುರು ಬಸವಣ್ಣನವರು, ನಾವು ಪ್ರತಿಯೊಬ್ಬರೂ ಬಸವಣ್ಣನವರ ವಚನ ಮೈಗೂಡಿಸಿಕೊಂಡಾಗ ನಮ್ಮ ಜೀವನ ಪಾವನವಾಗುತ್ತದೆ. ಇಂತಹ ಗಡಿ ಭಾಗದಲ್ಲಿ ಹೆಣ್ಣು ಮಕ್ಕಳು ಭಜನೆ ಮೂಲಕ ಭಕ್ತಿ, ಶೃದ್ದೆಯಿಂದ ಬಸವಣ್ಣನವರ ಮೂರ್ತಿ ಮೆರವಣಿಗೆ ಮಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಸವಣ್ಣನವರ ಮೂರ್ತಿ ದಾಸೋಹ ಸೇವೆ ನೀಡಿರುವ ಅರವಿಂದ ಜಮಾದಾರ್, ರಮೇಶ್ ಪಾಟೀಲ್, ಕಾಶಿನಾಥ ಬಿರಾದರ್, ಸೂರ್ಯಕಾಂತ ಮಾಮೂಡಗೆ ಕಾಶಿನಾಥ್ ಧಡ್ದೆ, ಮಲ್ಲಿಕಾರ್ಜುನ್ ಧಡ್ದೆ, ಬಂಡಯ್ಯ ಮಾಮುಡ್ಗೆ , ಶಿವಶರಣಯ್ಯ ಮಾಮಡ್ಗೆ, ಅಮರ್ ಬಿರಾದರ್, ಸಚಿನ್ ಮಾಮೂಡಗೆ, ಶಿವದಾಸ ಮಾಮೂಡಗೆ, ಗುರುಲಿಂಗ ಮಾಮೂಡಗೆ, ಕಾಶಿನಾಥ್ ಶೆರೆ, ಶಿವಪುತ್ರ ಸ್ವಾಮಿ ಕಾಸರತುಗಾವ ಹಾಗೂ ಗ್ರಾಮಸ್ಥರು ಇದ್ದರು .
ಮಲ್ಲಿಕಾರ್ಜುನ್ ಪಾಟಿಲ್ ನಿರೂಪಿಸಿ ವಂದಿಸಿದರು.