ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ನಡೆಯಲಿ

ಯಾದಗಿರಿ,ಮಾ.16-ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ವಿಶ್ವಜ್ಯೋತಿ ಪುಟ್ಟರಾಜ ಕಲಾ ಸಂಸ್ಥೆ ಅಬ್ಬೆ ತುಮಕೂರು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಯೋಗೇಶ್ ಬೆಸ್ತರ್ ಅವರ ಆಪ್ತ ಕಾರ್ಯದರ್ಶಿ ಪ್ರಮೋದ್ ದಸ್ತ ಅವರು ಮಾತನಾಡಿ, ಕರ್ನಾಟಕದ ಗಡಿಭಾಗದ ಗ್ರಾಮಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು. ಕನ್ನಡ ಭಾಷೆಗೆ ಬಹುದೊಡ್ಡ ಇತಿಹಾಸವಿದೆ ಅದನ್ನು ತಿಳಿದುಕೊಳ್ಳುವಂತ ಮನೋಭಾವ ನಮ್ಮೆಲ್ಲರಲ್ಲಿ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಪತ್ರಕರ್ತ ವೈಜನಾಥ್ ಹಿರೇಮಠ ಮಾತನಾಡಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವತ್ತು ಅನೇಕ ಸಂಘ ಸಂಸ್ಥೆಗಳ ಮುಖಾಂತರ ಇಂತಹ ಕನ್ನಡದ ಜಾಗೃತಿಯ ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಕನ್ನಡದ ನೆಲ ಜಲ ಭಾಷೆಯ ಬಗ್ಗೆ ಕಾಳಜಿ ಮೂಡಿಸುತ್ತಿದೆ. ಅದರ ಜೊತೆಗೆ ನಾವು ಕೂಡ ಕನ್ನಡದ ಅಭಿಮಾನವನ್ನು ತೊಟ್ಟು ಈ ನಾಡಿಗೆ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಪ್ರಮೀಳಾ ಗುರು ಮಾತನಾಡಿ, ನಮ್ಮ ದೇಶ ಅನೇಕತೆಯಲ್ಲಿ ಏಕತೆಯನ್ನು ಹೊಂದಿ ಸರ್ವರಿಗೂ ಸಮಾನತೆಯನ್ನು ನೀಡಿ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ತೋಟೆಂದ್ರ ಶಾಸ್ತ್ರಿಗಳು ಅಬ್ಬೆ ತುಮಕೂರು, ಪ್ರಭು ಕೆ ಗುಡೂರು, ಸಾಹಿತಿ ಶಿವಕುಮಾರ್ ಕುಂಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಲಾವಿದರಾದ ಸೈದಪ್ಪ ಗವಾಯಿಗಳು ಚೌಡಾಪುರ್, ವಿಜಯಲಕ್ಷ್ಮಿ ಎಸ್ ಕೆಂಗನಾಳ, ಸಂಗಮೇಶ ಪಾಟೀಲ್ ದಂಗಾಪುರ್, ಉದಯ್ ಕುಮಾರ್ ಶಾಸ್ತ್ರಿಗಳು ಭೀಮಳ್ಳಿ, ರಾಚಯ್ಯ ಶಾಸ್ತ್ರಿಗಳು ರಟಗಲ್, ನಾಗಲಿಂಗಯ್ಯ ಸ್ಥಾವರಮಠ ಆಲೂರ್, ಶಿವಲಿಂಗೇಶ್ವರ ಕೆಂಗನಾಳ, ಸೂರ್ಯಕಾಂತ್ ಪೂಜಾರಿ ಗೊಬ್ಬರವಾಡಿ, ವೀರಭದ್ರಯ್ಯ ಸ್ಥಾವರ ಮಠ ಬೋಸ್ನೂರ್, ಚೇತನ್ ಬೀದಿ ಮನಿ, ಶರಣ ಕುಮಾರ್ ಗೋಗಿ, ಚಂದ್ರಕಾಂತ್ ಎಂ ಗುಳಗಿ, ಸಂಗೀತ ಸುಧೆ ನೀಡಿದರು. ಜೋತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈ ಎಲ್ಲ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.