ಶಹಾಪೂರ:ಮಾ.29:ಭಾರತ ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಕರ್ನಾಟಕದ ಗಡಿ ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ಗಡಿ ಸಾಂಸ್ಕೃತಿಕ ಉತ್ಸವಗಳನ್ನು ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜನೆ ಮಾಡುತ್ತಿರುವುದು ಅತ್ಯಂತ ಮಹತ್ವದ ಮತ್ತು ರಚನಾತ್ಮಕ ಕಾರ್ಯ ಆಗಿದೆ ಎಂದು ನಗನೂರಿನ ಸೂಗುರೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ. ಸೂಗುರೇಶ್ವರ ಶಿವಾಚಾರ್ಯರು ಹೇಳಿದರು. ಶಹಾಪೂರ ತಾಲೂಕಿನ ಚಾಮನಾಳದ ಸಿದ್ದಲಿಂಗ ಮಠದ ಆವರಣದಲ್ಲಿ ಬೆಳದಿಂಗಳು ಸಾಂಸ್ಕೃತಿಕ ಯುವಕ ಸಂಘ ಚಾಮನಾಳ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಿದ್ದ ಗಡಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಗಡಿಭಾಗದ ಜಿಲ್ಲೆಗಳಲ್ಲಿ ಈ ರೀತಿಯ ಕನ್ನಡ ಭಾಷಭಿಮಾನ ಮತ್ತು ಸಾಂಸ್ಕೃತಿಕ ಆಸಕ್ತಿ ಬೆಳೆಸುವ ಚಟುವಟಿಕೆಗಳು ವರ್ಷದೂದ್ದಕ್ಕು ಆಯೋಜಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಗಡಿಭಾಗದ ಜಾನಪದ ಕಲೆಗಳು ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಶ್ರೀಮಠದ ಪೂಜ್ಯ ವೇದಮೂರ್ತಿ ಬಸಯ್ಯ ಸ್ವಾಮಿಗಳು ಉದ್ಘಾಟಿಸಿದರು, ಹಿರೇಮಠದ ಆನಂದ ಸ್ವಾಮಿಗಳು ನೇತೃತ್ವ ವಹಿಸಿದ್ದರು, ಮುಖಂಡ ಹೊನ್ನಪ್ಪಗೌಡ ಚಾಮನಾಳ, ಕಲಾವಿಧ ಶಿವಪ್ಪ ಹೆಬ್ಬಾಳ, ಕರ್ನಾಟಕ ಜಾನಪದ ಪರಿಷತ್ತಿನ ಶಹಾಪೂರ ತಾಲೂಕ ಅಧ್ಯಕ್ಷ ಮಹಾಂತೇಶ ಗಿಂಡಿ, ಜಿಲ್ಲಾ ಕಾರ್ಯದರ್ಶಿ ನೀಲಪ್ಪ ಚೌದರಿ, ಸಗರ ವಲಯ ಅಧ್ಯಕ್ಷ ಮನೋಹರ ವಿಶ್ವಕರ್ಮ, ಮುಖಂಡ ಸಿದ್ದನಗೌಡ ಹೆಬ್ಬಾಳ, ಮಲ್ಲು ಬಾದ್ಯಾಪೂರ ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಇತರರಿದ್ದರು, ಸಂಸ್ಥೆಯ ಅಧ್ಯಕ್ಷ ಕಲ್ಯಾಣಶೆಟ್ಟಿ ಅಂಗಡಿ ಅಧ್ಯಕ್ಷತೆ ವಹಿಸಿದ್ದರು, ನಿಂಗಣ್ಣ ವಿಶ್ವಕರ್ಮ ಮಲ್ಲಾ ಪ್ರ್ರಾರ್ಥಿಸಿದರು, ಮಂಜುನಾಥ ಹಿರೇಮಠ ಚಾಮನಾಳ ನಿರೂಪಿಸಿದರು, ಹಣಮಂತ್ರಾಯ ದೇವತ್ಕಲ್ ಸ್ವಾಗತಿಸಿದರು, ಪ್ರವೀಣ ಜಕಾತಿ ವಂದಿಸಿದರು. ಇದೇ ಸಂದರ್ಭದಲ್ಲಿ ಬೀರಲಿಂಗಪ್ಪ ಮಂಜಲಾಪುರ ಮತ್ತು ತಂಡದವರಿಂದ ಡೊಳ್ಳು ಕುಣಿತ ಪ್ರದರ್ಶನ, ಬಸವರಾಜ ವನದುರ್ಗ ಮತ್ತು ತಂಡದವರಿಂದ ಕರಡಿ ಮಜಲು ಪ್ರದರ್ಶನ, ದೇವಮ್ಮ ಚಂದ್ರಮ್ಮ ಸಂಗಡಿಗರು ಕೋಡೆಕಲ್ ಅವರಿಂದ ಸಂಪ್ರದಾಯದ ಹಾಡುಗಳು ಹಾಗೂ ಆಕಶವಾಣಿ ಕಲಾವಿಧರಾದ ಬಲವಂತಪ್ಪ ವಿಶ್ವಕರ್ಮ, ಮಲ್ಲಿಕಾರ್ಜುನ ಹೂಗಾರ, ಯಲ್ಲಪ್ಪ ಮಾಸ್ಟರ್, ಬಸವರಾಜ ಜಾಯಿ ಸಂಗಡಿಗರಿಂದ ಜನಪದ ಗಾಯನ ಮತ್ತು ಸ್ಥಳಿಯ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನ-ಮನ ಸುರೆಗೊಂಡವು.