ಗಡಿ ಜಿಲ್ಲೆಯಲ್ಲಿ ಜನರಿಲ್ಲದ ರಾಜ್ಯೋತ್ಸವ

ಚಾಮರಾಜನಗರ: ನ.01:- ಸಚಿವ ಸೋಮಣ್ಣ ಅವರಿಗೆ ರೈತರು ಹಾಗೂ ಇನ್ಯಾರದಾರೂ ಕಪ್ಪು ಬಾವುಟ ಪ್ರದರ್ಶನ ಮಾಡಬಹುದೆಂಬ ಆತಂಕ ಹಿನ್ನೆಲೆಯನ್ನು ಭಾರೀ ಪೆÇಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಜಿಲ್ಲಾ ಪೆÇಲೀಸ್ ಕವಾಯತು ಮೈದಾನದಲ್ಲಿ ರಾಜ್ಯೋತ್ಸವ ಆಯೋಜಿಸಿದ್ದು ಧ್ವಜಾರೋಹಣಕ್ಕೆ ಸಚಿವ ಸೋಮಣ್ಣ ಆಗಮಿಸಿರುವುದರಿಂದ ಕಪಾಲಮೋಕ್ಷ ವಿವಾದ ಹಾಗೂ ರೈತರು ಆಕ್ರೋಶಗೊಂಡು ಅಹಿತಕರ ಘಟನೆ ನಡೆಸಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಹಂತದಲ್ಲಿ ಪೆÇಲೀಸ್ ಸರ್ಪಗಾವಲನ್ನು ರೂಪಿಸಲಾಗಿದೆ.
ಈ ಬಿಗಿ ಭದ್ರತೆ ಪರಿಣಾಮ ನಾಡಹಹಬ್ಬ, ರಾಷ್ಟೀಯ ಹಬ್ಬಗಳಿಗೆ ತುಂಬಿ ತುಳುಕುತ್ತಿದ್ದ ಜನರು ಇಂದಿನ ರಾಜ್ಯೋತ್ಸವದಲ್ಲಿ ಭಾಗಿಯಾಗಿಲ್ಲ. ಕಂದಾಯ ಇಲಾಖೆ ನೌಕರರು, ಶಿಕ್ಷಕರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳಿಗಷ್ಟೇ ಇಂದಿನ ರಾಜ್ಯೋತ್ಸವ ಸೀಮಿತವಾದಂತೆ ಕಾಣುತ್ತಿತ್ತು.
ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿದ ಸಚಿವ ಸೋಮಣ್ಣ ವಿವಿಧಟg ಇಲಾಖೆಗಳು ಸೇರಿದಂತೆ 19 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಅವರು ಮಾತನಾಡಿ, ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ, ನಾಡಿನ ಚೇತನ ಪುನೀತ್‍ಛಿ ರಾಜ್‍ಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದ್ದು ಜನರ ಒತ್ತಾಸೆಯಾಗಿತ್ತು ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಡಿಸಿ ರಮೇಶ್, ಬಿಆರ್ ಟಿ ಡಿಸಿಎಫ್ ದೀಪಾ ಕಂಟ್ರಾಕ್ಟರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಇದ್ದರು