ಗಡಿ ಗ್ರಾಮಗಳಲ್ಲಿ ಕೊರೊನಾ ಹೈ ಅಲರ್ಟ್: ಮನೆ-ಮನೆ ಸರ್ವೇಕೈಗೊಂಡ ಆರೋಗ್ಯ ಇಲಾಖೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.21:- ಕೇರಳದಲ್ಲಿ ರೂಪಾಂತರಿ ಕೊರೊನಾ ಆರ್ಭಟ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಗಡಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್‍ಆಗಿದೆ.
ಕೇರಳ ಗಡಿ ಹೊಂದಿಕೊಂಡಂತಿರುವ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ, ಕಗ್ಗಳದಹುಂಡಿ ಗ್ರಾಮಗಳಿಗೆ ಇಂದುಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಮನೆ-ಮನೆ ಸರ್ವೇ ನಡೆಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ನೆಗಡಿ, ಕೆಮ್ಮು, ಜ್ವರದಿಂದ ಬಳಲುವರಿಗೆ ಕೋವಿಡ್‍ಟೆಸ್ಟ್ ಮಾಡಲಾಗುತ್ತಿದ್ದು ಕೇರಳದಿಂದ ಬಂದವರಿಗೆ ಸ್ವಯಂಕ್ವಾರಂಟೈನ್ ಆಗಲು ಸೂಚನೆ ಕೊಡಲಾಗುತ್ತಿದೆ. ಶಬರಿಮಲೆಯಿಂದಯಾರಾದರೂ ಹಿಂತಿರುಗಿದ್ದಾರಎಂಬುದರ ಬಗ್ಗೆಯೂಆರೋಗ್ಯ ಮಾಹಿತಿ ಕಲೆ ಹಾಕುತ್ತಿದ್ದುಕೊರೊನಾ ಸಂಬಂಧಕಟ್ಟೆಚ್ಚರ ವಹಿಸಲಾಗಿದೆ.
ಚೆಕ್ ಪೆÇೀಸ್ಟ್‍ನಲ್ಲಿ ಹದ್ದಿನ ಕಣ್ಣು:
ಕರ್ನಾಟಕ ಮತ್ತುಕೇರಳ ಗಡಿಭಾಗವಾದ ಮೂಲೆಹೊಳೆ ಚೆಕ್ ಪೆÇೀಸ್ಟ್ ನಲ್ಲಿ ಇಂದಿನಿಂದ ವಾಹನ ತಪಾಸಣೆಕೈಗೊಂಡಿದ್ದುಜ್ವರ, ಶೀತದಿಂದ ಬಳಲುವ ಕೇರಳದವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ.