ಗಡಿ ಕಾಯುವ ಸೈನಿಕರಿಗೆ ಅದ್ಧೂರಿ ಸ್ವಾಗತ

ಸೈದಾಪುರ:ಎ.12: ದೇಶದ ಗಡಿಯನ್ನು ಕಾಯುವ ಭದ್ರತಾ ಪಡೆ ಯೋಧರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಇಲ್ಲಿನ ಜನರು ಹೂ ಮಾಲೆಗಳನ್ನು ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.

ಪಟ್ಟಣದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ನಿರ್ಭಿತ ಮತದಾನ ಮತ್ತು ಮತದಾನ ಜಾಗೃತಿಗೆ ಆಗಮಿಸಿದ ಯೋದರಿಗೆ ಇಲ್ಲಿನ ಯುವಕರು ಪ್ರತಿ ರಸ್ತೆಗಳಲ್ಲಿ ದೇಶ ಭಕ್ತಿಯ ಜೈಕಾರ, ಹೂಮಾಲೆಗಳು, ತಂಪು ಪಾನೀಯ ಹಾಗೂ ಹಣ್ಣುಗಳನ್ನು ನೀಡಿ ಗೌರವವನ್ನು ಸೂಚಿಸಿ ಆತ್ಮೀಯವಾಗಿ ಪಟ್ಟಣಕ್ಕೆ ಸ್ವಾಗತಿಸಿದರು. ವಿಧಾನಸಭಾ ಚುನಾವಣೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಎಲ್ಲ ರೀತಿಯ ಭದ್ರತೆಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಸಂದೇಶವನ್ನು ಪಥ ಸಂಚಲನದ ಮೂಲಕ ಸಾರಲಾಯಿತು.

ಅಂಬಿಗರ ಚೌಡಯ್ಯ ವೃತ್ತದಿಂದ ಪ್ರಾರಂಭವಾದ ಪಥಸಂಚಲನವು ಪ್ರಮುಖ ರಸ್ತೆಗಳ ಮೂಲಕ ಕನಕ, ಬಸವೇಶ್ವರ ವೃತ್ತಗಳಲ್ಲಿ ಹಾಗೂ ಕಡೇಚೂರು, ಬಾಡಿಯಾಳ, ಮಲ್ಹಾರ, ಬೆಳಗುಂದಿ ಗ್ರಾಮಗಳಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು. ಪಥ ಸಂಚಲಕ್ಕೆ ಭದ್ರತಾ ಪಡೆಯ ಹಿರಿಯ ಅಧಿಕಾರಿ ಆನಂದ ಸಿಂಗ್, ನರೇಂದ್ರ ಪಾಲ್, ಹಾಗೂ ಸ್ಥಳೀಯ ಪೋಲಿಸ್ ಠಾಣೆಯ ಪಿಐ ಮತ್ತು ಪೋಲಿಸರು ಸಾಥ್ ನೀಡಿದರು.

ಶಾಲೆ ಮಕ್ಕಳ ವಾದ್ಯದಿಂದ ಮತದಾನ ಜಾಗೃತಿ: ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾನ ಜಾಗೃತಿ ಮತ್ತು ಸಾರ್ವಜನಿಕರು ನಿರ್ಭಿತಿಯಾಗಿ ಮತದಾನ ಮಾಡಿ ಎಂಬ ಸಂದೇಶ ಸಾರಲು ಆಗಮಿಸಿದ ಭದ್ರತಾ ಪಡೆಗಳಿಗೆ ಇಲ್ಲಿನ ಸ್ಥಳೀಯ ವಿದ್ಯಾ ವರ್ಧಕ ಶಾಲೆ ವಿದ್ಯಾರ್ಥಿಗಳು ತಮ್ಮ ವಾದ್ಯಗಳನ್ನು ನುಡಿಸುವ ಮೂಲಕ ಅರೇ ಸೇನಾಪಡೆಯೊಂದಿಗೆ ಹೆಜ್ಜೆಗಳನ್ನು ಹಾಕಿ ಸಾರ್ವಜನಿಕರಿಂದ ಮೆಚ್ಚಿಗೆ ಪಡೆದರು. ಮಲ್ಲಣ್ಣಗೌಡ ಸೈದಾಪುರ, ಶಿವುಕುಮಾರ ಹೂಗಾರ, ಭೀಮಣ್ಣ ಮಡಿವಾಳ, ತಾಯಪ್ಪ ಬೊಮ್ಮಣ್ಣನೋರ್, ಹಣಮಂತರೆಡ್ಡಿ ನಾಯಕ್, ಸೇರಿದಂತೆ ಇತರರಿದ್ದರು.