ಗಡಿಲಿಂಗದಳ್ಳಿ ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಚಿಂಚೋಳಿ,ಏ.4- ತಾಲೂಕಿನ ಗಡಿಲಿಂಗದಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೋನು ನಾಯಕ ತಾಂಡಾ ಮತ್ತು ಗಡಿಲಿಂಗದಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಉಪ ಪ್ರಾಥಮಿಕ ಆರೋಗ್ಯ ಇಲಾಖೆಯ ವತಿಯಿಂದ 45 ವರ್ಷದ ಮೇಲ್ಪಟ್ಟ ವಯಸ್ಸಿನ ಗ್ರಾಮಸ್ಥರಿಗೆ ಕೋವಿಡ್ 19 ಲಸಿಕೆ ನೀಡುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.
ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಗಡಿಲಿಂಗದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಗೌರಿಶಂಕರ ಉಪ್ಪಿನ ಅವರು, ಕೋವಿಡ್ 19 ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ. ತಾಂಡದ ಮುಖಂಡರಾದ ನರಸಿಂಗರಾವ್. ಸುಭಾಷ್ ನಾಯಕ್. ಮೋನು. ಎಸ್ಡಿಎಂಸಿ ಅಧ್ಯಕ್ಷರಾದ ಸುಭಾಷ್. ವೀರಶೆಟ್ಟಿ ಚಿಟ್ಟೆ. ಗಡಿಲಿಂಗದಳ್ಳಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮೋಹನ. ಶಾರದಾ. ಮತ್ತು ಅನೇಕ ತಾಂಡದ ಗ್ರಾಮಸ್ಥರು ಇದ್ದರು.