ಹುಲಸೂರ: ಜು.25:ತಾಲ್ಲೂಕಿನ ಗಡಿರಾಯಪಳ್ಳಿ ಗ್ರಾಮದ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಖದೀಮರು, ಹಣ, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಮುಚಳoಬ ಗ್ರಾಮ ಪಂಚಾಯಿತಿಯಲ್ಲಿ ಬರುವ ಗಡಿರಾಯಪಳ್ಳಿ ಗ್ರಾಮದಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ನುಗ್ಗಿ ಹಣ, ಚಿನ್ನಾಭರಣ ಲೂಟಿ ಮಾಡಿ ಕೃತ್ಯದ ಬಳಿಕ, ಮನೆಯ ವಸ್ತುಗಳನ್ನು ಜಮೀನಿನಲ್ಲಿ ಎಸೆದು ಹೋಗಿದ್ದಾರೆ.
ಒಂದು ಮನೆಯಲ್ಲಿ 3 ತೊಲೆ ಬಂಗಾರದ ಉಂಗುರ, ಬಂಗಾರದ ಸರ, ಕಾಲುಂಗುರ, ?60 ಸಾವಿರ ನಗದು ದೋಚಿದ್ದಾರೆ. ಮತ್ತೊಂದು ಮನೆಯಲ್ಲಿ ಗೃಹಿಣಿಯ ಮಂಗಳಸೂತ್ರ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಣ, ಬಂಗಾರ ಕಳೆದುಕೊಂಡವರು ಕಣ್ಣೀರಿಡುತ್ತಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.