ಗಡಿಯೊಳಗೆ ನುಸುಳಲು ಯತ್ನ: ಉಗ್ರನ ಹತ್ಯೆ

ಶ್ರೀನಗರ.ನ೮_ಜಮ್ಮು ಮತ್ತು ಕಾಶ್ಮೀರದ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಒಳನುಸುಳಲು ಯತ್ನಿಸಿದ್ದು, ಉಗ್ರನನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ.
‘ಗಡಿಭಾಗದ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರನ್ನು ತಡೆಯುವಲ್ಲಿ ಗಸ್ತು ಪಡೆ ಸಫಲವಾಗಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಂದು ಮಾಹಿತಿ ನೀಡಿದೆ.ಗಸ್ತು ಪಡೆಯು ಶನಿವಾರ ಮಧ್ಯರಾತ್ರಿ ಮಚಿಲ ಸೆಕ್ಟರ್‌ನ ಗಡಿ ಭಾಗದಲ್ಲಿ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದೆ.ಈ ವೇಳೆ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರು ಮತ್ತು ಗಸ್ತು ಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಉಗ್ರ ಹತನಾಗಿದ್ದಾನೆ’ ಎಂದು ಕರ್ನಲ್ ಕಾಳಿಯ ಅವರು ಮಾಹಿತಿ ನೀಡಿದರು.
ಘಟನಾ ಸ್ಥಳದಿಂದ ಎಕೆ ರೈಫಲ್, ಎರಡು ಬ್ಯಾಗಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿತರ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅವರು ಹೇಳಿದರು.