ಗಡಿಯೊಳಕ್ಕೆ ಉಗ್ರರು ನುಸುಳಲು ಪಿತೂರಿ;ಕಟ್ಟೆಚ್ಚರ

ನವದೆಹಲಿ, ಡಿ ೨೮-ಚಳಿಗಾಲದ ಸಮಯದಲ್ಲಿ ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ನಿಯಂತ್ರಣ ರೇಖೆಯುದ್ದಕ್ಕೂ ಉದ್ವಿಗ್ನತೆಯನ್ನು ಹೆಚ್ಚಿಸುವ ಹತಾಶ ಪ್ರಯತ್ನಗಳನ್ನು ಮಾಡಲಿದೆ ಎಂದು ಹಿರಿಯ ಸೇನಾಧಿಕಾರಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸಂವಾದದಲ್ಲಿ ಮಾತನಾಡಿದ ಎಕ್ಸ್‌ವಿ ಕಾರ್ಪ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಲಾಂಚ್ ಪ್ಯಾಡ್‌ಗಳಲ್ಲಿ ೨೦೦ ರಿಂದ ೨೫೦ ಉಗ್ರರು ಒಳನುಸುಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬ ನಿರಂತರ ವರದಿಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಗಡಿಯಲ್ಲಿ ಪ್ರತಿಕೂಲ ಹವಾಮಾನದ ಲಾಭ ಪಡೆದು ಉಗ್ರರು ಒಳನುಸುಳುವ ಪ್ರಯತ್ನ ನಡೆಸುತ್ತಾರೆ. ಭದ್ರತೆ ಪಡೆಗಳು ನಿಯಂತ್ರಣ ರೇಖೆಯ ಮೂಲಕ ಕಾಶ್ಮೀರಕ್ಕೆ ನೇರ ಒಳನುಸುಳುವಿಕೆ ಮತ್ತು ಪಿಅರ್ ಪಂಜಾಬ್ ದಕ್ಷಿಣದ ಮೂಲಕ ನುಸುಳುಲು ಯತ್ನಿಸುವ ಸಾಧ್ಯತೆಯಿದ್ದು, ಈ ಪ್ರದೇಶಗಳಲ್ಲಿ ಸೇನೆ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ೧೧ ರಾಜಕೀಯ ಪಕ್ಷಗಳ ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿ ಒಕ್ಕೂಟ ನೇತೃತ್ವದ ಇಮ್ರಾನ್ ಖಾನ್ ಸರ್ಕಾರಕ್ಕೆ ಮುಂದಿನ ವರ್ಷ ಜ.೩೧ರೊಳಗೆ ರಾಜೀನಾಮೆ ನೀಡುವಂತೆ ಸೇನಾಧಿಕಾರಿ ಬೆದರಿಕೆ ಹಾಕಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಕಾಶ್ಮೀರದ ಡಿಡಿಸಿ ಚುನಾವಣೆ ಶಾಂತಿಯುವಾಗಿ ನಡೆದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜನರಿಗಾಗಿ ಚುನಾಯಿತಿ ಪ್ರತಿನಿಧಿಗಳು ಜನರಿಗಾಗಿ ಕೆಲಸ ಮಾಡಬೇಕಾದ ಸಮಯ, ಅಭಿವೃದ್ಧಿ ಮಾಡಿ ತೋರಿಸಬೇಕಾಗಿದೆ ಎಂದು ಹೇಳಿದರು.