ಗಡಿಯಲ್ಲಿ ವೀಕೆಂಡ್ ಕರ್ಫ್ಯೂ: ಜನ ಮನೆಯಿಂದ ಹೊರಬರದೆ ನಗರ ಸಂಪೂರ್ಣ ನಿಶ್ಯಬ್ದ

ಬೀದರ:ಎ.24: ನಗರದಲ್ಲಿ ಇಂದು ಹಾಗೂ ನಾಳೆ ರಾಜ್ಯ ಸರ್ಕಾರ ಹಮ್ಮಿಕೊಂಡ ವಿಕ್ ಏಂಡ್ ಕರ್ಪ್ಯು ನಿಮಿತ್ಯ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ಸಂಪೂರ್ಣ ಸ್ತಬ್ದವಾಗಿದ್ದು ವಾಹನ ಸಂಚಾರ ಸಹ ವೀರಳವಾಗಿ ಸಂಚರಿಸುತ್ತಿದ್ದವು. ಕೋವಿಡ್ 2ನೇ ಅಲೆಗೆ ಬೀದರ್ ಜಿಲ್ಲೆ ಜನ ಬೆಚ್ಚಿ ಬಿದ್ದಿದ್ದು ತಾವೇ ಸ್ವಯಂ ಲಾಕ್ ಧಾನ್ ಮಾಡಿಕೊಂಡಂತೆ ಕಾಣುತ್ತಿದೆ. ನಗರದ ಅಂಬೇಡ್ಕರ್‌ ಸರ್ಕಲ್ ಬಳಿ ಹಾಗೂ ಗವಾನ್ ಸರ್ಕಲ್ ಬಳಿ ಮಾತ್ರ ಪೋಲಿಸರು ಕಂಡು ಬಂದಿದ್ದು ಉಳಿದೆಡೆ ಎಲ್ಲಿಯೂ ಪೋಲಿಸರು ಕಂಡು ಬರದಿದ್ದರೂ ಜನ ಮಾತ್ರ ರಸ್ತೆಗೆ ಇಳಿಯುತ್ತಿಲ್ಲ. ಕೊವಿಡ್ ಮೊದಲನೇ ಅಲೆ ವೇಳೆ ಜನರು ಮನೆಯಲ್ಲೇ ಇರಿ ಎಂದು ಎಷ್ಟೇ ಹೇಳಿದರೂ ಕೇಳದೇ ಪೋಲಿಸರ ಕೈಯಿಂದ ಲಾಠಿ ರುಚಿ ನೋಡಿರುವ ಉದಾಹರಣೆ ಸಾಕಷ್ಟಿವೆ. ಒಟ್ಟಾರೆ ವೀಕೆಂಡ್ ಕರ್ಪ್ಯೂ ದಲ್ಲಿ ಗಡಿ ಜಿಲ್ಲೆ ಬೀದರ್ ಸಂಪೂರ್ಣ ನಿಶ್ಯಬ್ದ ವಾಗಿರುವುದು ಸಂತಸದ ವಿಷಯ.