ಗಡಿಯಲ್ಲಿ ಮರಾಠಿ ಭಾಷಿಕರ ಪುಂಡಾಟಿಕೆ:ಕೆ.ಎಸ್.ಆರ್.ಟಿ.ಸಿ ಬಸ್‍ಗೆ ಮಸಿ


ಬೆಳಗಾವಿ, ನ 25: ಅತ್ತ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಿಸಿ ಮತ್ತೆ ಕಾವು ಪಡೆಯತೊಡಗಿದ್ದರೆ, ಇತ್ತ ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರ ಪುಂಡಾಟಿಕೆ ಮತ್ತೆ ಗರಿಗೆದರತೊಡಗಿದೆ.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗೆ ಕಪ್ಪು ಮಸಿ ಬಳಿಯುವ ಮೂಲಕ ಮತ್ತೇ ಪುಂಡಾಟಿಕೆ ಮಾಡಿದ್ದಾರೆ.
ಔರಂಗಾಬಾದ್ ಜಿಲ್ಲೆಯ ದೌಂಡ ಗ್ರಾಮದ ಬಳಿ ನಿಪ್ಪಾಣಿ-ಔರಂಗಾಬಾದ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೆÇೀಗೆ ಸೇರಿದ ಕೆ.ಎಸ್.ಆರ್.ಟಿ.ಸಿ ಬಸ್‍ಗೆ ಪುಂಡರು ಮಸಿ ಬಳಿದಿದ್ದಾರೆ.
ಬಸ್ಸಿಗೆ ಮಸಿ ಬಳಿಯುವ ಜೊತೆಗೆ ಮಹಾರಾಷ್ಟ್ರ ನಮ್ಮ ಹಕ್ಕು, ಯಾರಪ್ಪನದೂ ಅಲ್ಲ ಎಂಬ ಘೋಷಣೆಗಳನ್ನು ಪುಂಡರು ಕೂಗಿದ್ದಾರೆನ್ನಲಾಗಿದೆ.
ಇದನ್ನು ಭಾಷಾ ವೈಷಮ್ಯದ ವಿಷಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಲಾಗುತ್ತಿರುವ ಹುನ್ನಾರ ಎಂದೂ ಅರ್ಥೈಸಲಾಗುತ್ತಿದೆ