ಗಡಿಯಲ್ಲಿ ಜನಪದ ಉಳಿಸಿದರೆ ಉಭಯ ರಾಜ್ಯಗಳ ನಂಟುವೃದ್ಧಿ

ಬೀದರ: ಜು.24:ಕರ್ನಾಟಕ ಮತ್ತು ತೆಲಂಗಾಣ ಗಡಿಯಲ್ಲಿರುವ ನ್ಯಾಲಕಲ್ ಮಂಡಲದ ಜೆಡ್.ಪಿ.ಎಚ್.ಎಸ್. ಸರ್ಕಾರಿ ಶಾಲೆಯ ಆವರಣದಲ್ಲಿ ಸಂಸ್ಕøತಿ ಮಂತ್ರಾಲಯ ನವದೆಹಲಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಓಂಸಾಯಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ದಕ್ಷಿಣ ಮಧ್ಯವಲಯ ಸಾಂಸ್ಕøತಿಕ ಕೇಂದ್ರ ನಾಗಪುರ ವತಿಯಿಂದ ಜನಪದ ನೃತ್ಯ ಭಾರತ ಭಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪೂಜ್ಯ ಶ್ರೀ ದೇವಗಿರಿ ಮುಂಗಿ ಮಹಾರಾಜರು ಉದ್ಘಾಟಿಸಿ ಮಾತನಾಡಿ “ಗಡಿಭಾಗಗಳಲ್ಲಿ ಜನಪದ ಕಾರ್ಯಕ್ರಮಗಳ ಆಯೋಜನೆಯಿಂದ ಪರಸ್ಪರ ಉಭಯ ರಾಜ್ಯಗಳ ನಂಟು ವೃದ್ಧಿಸುತ್ತದೆ. ಜನಪದ ಎಂಬುದು ಭಾರತದ ಉಸಿರು. ಉಸಿರಿಲ್ಲದೆ ಮನುಷ್ಯ ಹೇಗೆ ಬದುಕಲು ಸಾಧ್ಯವಿಲ್ಲವೋ, ಜನಪದ ಇಲ್ಲದೆ ವ್ಯಕ್ತಿಯ ಸಂಸ್ಕøತಿ, ಆಚಾರ ಅಪೂರ್ಣ ಎಂದು ತಿಳಿಸಿದರು.
ಜಹಿರಾಬಾದ ಗ್ರಾಮೀಣ ವೃತ್ತ ನಿರೀಕ್ಷಕರಾದ ಭರತಕುಮಾರ ಅವರು ಮಾತನಾಡಿ “ಸರ್ಕಾರದ ಈ ರೀತಿಯ ಜನಪದ ನೃತ್ಯ ಕಾರ್ಯಕ್ರಮಗಳಿಂದ ಕಲಾವಿದರ ಬದುಕು ಹಸನಾಗುವುದಲ್ಲದೆ ಹಿರಿಯರು ಕಟ್ಟಿ ಬೆಳೆಸಿದ ಜನಪದ ಕಲೆ ಸಾಹಿತ್ಯ ಮತ್ತು ಸಂಸ್ಕøತಿ ಉಳಿಯುತ್ತದೆ. ಕಲೆ ಉಳಿದರೆ ಕಲಾವಿದರು ಉಳಿಯುತ್ತಾರೆ. ದೇಶ ಜನಪದ ಸಂಸ್ಕøತಿಯಿಂದ ಕಂಗೊಳಿಸುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಕಾರ್ಯಕ್ರಮದ ತೆಲಂಗಾಣ ಉಸ್ತುವಾರಿಗಳಾದ ಶಿವಶರಣಪ್ಪ ಗಣೇಶಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಲಕಲ್ ಗ್ರಾಮ ಪಂಚಾಯತ್ ಸರಪಂಚ್ ಶಿವಶರಣಯ್ಯ ಸ್ವಾಮಿ, ಸಿದ್ಧಲಿಂಗ ಸ್ವಾಮಿ, ಮಾರುತಿ ಆರ್.ನಾಯಕ, ಶ್ರೀಮತಿ ಸಂಗಮ್ಮ, ಇಂದ್ರಸೇನರೆಡ್ಡಿ, ಎಂ.ಸುಭಾಶಚಂದ್ರ, ವಿಶ್ವನಾಥ ಯಾದವ, ರಾಮಚಂದ್ರರಾವ ಪವಾರ್, ಸತೀಶ ಕುಲಕರ್ಣಿ, ಎಂ.ಅಶೋಕ, ಬಿ.ಶ್ರೀನಿವಾಸರೆಡ್ಡಿ, ಏಕನಾಥ ಪಾಟೀಲ, ಕೆ.ಭಾಸ್ಕರರೆಡ್ಡಿ, ಎಸ್.ಸತ್ಯನಾರಾಯಣ, ಗಿರೀಶರಾವ ಜೋಶಿ ಸೇರಿದಂತೆ ಅನೇಕರಿದ್ದರು.
ಸಿದ್ದಣ್ಣ ಓಟಿ ಸ್ವಾಗತಿಸಿದರು. ಪಿ. ವೆಂಕಟರೆಡ್ಡಿ ನಿರೂಪಿಸಿದರೆ ಸತೀಶ ಮಹಾರಾಜ ವಂದಿಸಿದರು.ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲಾಪ್ರದರ್ಶನ ಮಾಡಿದರು.