ಗಡಿಭಾಗ ಬೈರಂಪಳ್ಳಿ ಮತಗಟ್ಟೆ: ಶಾಂತಿಯುತ ಮತದಾನಕ್ಕೆ ಬಿಗಿಭದ್ರತೆ

ಚಿಂಚೋಳಿ,ಡಿ.27- ತಾಲೂಕಿನ ಕರ್ನಾಟಕ ಗಡಿಭಾಗವಾದ ಬೈರಂಪಳ್ಳಿ ಗ್ರಾಮದಲ್ಲಿ ಎರಡನೆ ಹಂತದ ಗ್ರಾಮ ಪಂಚಾಯತ ಚುನಾವಣೆಯ ಮತದಾನ ಚಳಿಯ ನಡುವೆಯು ಇಂದು ಮತದಾರರು ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಲು ಆಗಮಿಸಿದರು.
ಇಲ್ಲಿನ ಮತದಾನ ಕೇಂದ್ರಕ್ಕೆ ಚುನಾವಣೆ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಎಮ್.ಎ ಹುಸೇನ್ ಅವರು, ಕೇಂದ್ರವನ್ನು ಪರಿಶೀಲನೆ ಮಾಡಿದರು.
ಮತದಾನ ಇಂದು ಬೆಳಿಗ್ಗೆ 7ಗಂಟೆಯಿಂದ ಪ್ರಾರಂಭವಾಗಿದ್ದು, ಮಹಾಮಾರಿ ಕೊವೀಡ್-19 ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮತದಾನಕ್ಕೆ ಬರುವ ಮತದಾರರಿಗೆ ಸ್ಕ್ರೀನಿಂಗ್ ಮಾಡಿ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಶಾಂತಿಯುತ ಮತದಾನಕ್ಕಾಗಿ ವ್ಯಾಪಾಕ ಪೆÇಲೀಸ ಭದ್ರತೆ ಕಲ್ಪಿಸಲಾಗಿದೆ.