ಗಡಿಭಾಗದ ಚೆಕ್‍ಪೋಷ್ಟಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ : ಎಸಿ ರಾಹುಲ್ ಶಿಂಧೆ

ಇಂಡಿ :ಎ.30:ಕೊರೋನಾ 2 ಅಲೆ ತಡೆಗೆ ತಾಲೂಕ ಆಡಳಿತ ಗಡಿಯಲ್ಲಿ ಮಹಾರಾಷ್ಟ್ರದಿಂದ ಬರುವವರೆಗೆ ಹಾಗೂ ನುಸುಳುವವರನ್ನು ತಡೆಯಲು 2 ಪ್ರಮುಖ ಚೆಕ್‍ಪೆÇೀಷ್ಟಗಳ ಜೊತೆಗೆ ಉಳಿದ ಎಲ್ಲ ದಾರಿಗಳನ್ನು ಬಂದ್ ಮಾಡಲಾಗಿದೆ ಎಂದು ಎಸಿ ರಾಹುಲ್ ಶಿಂಧೆ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ,ಈ ಮೊದಲು ಧೂಳಖೇಡ ಹಾಗೂ ಶಿರಾಡೋಣಗಳಲ್ಲಿ ಎರಡು ಚೆಕ್‍ಪೆÇಷ್ಟ ಇದ್ದು,ಸಧ್ಯ ಗ್ರಾಮ ಪಂಚಾಯಿತಿ ಹಾಗೂ ಪೆÇಲೀಸ್ ಇಲಾಖೆಯ ಸಹಯೋಗದಲ್ಲಿ ಚಿಕ್ಕಮಣೂರ ಕ್ರಾಸ್ ಬಳಿ,ಕನಕನಾಳ-ಇಂಚಗೇರಿ ರಸ್ತೆ,ಚಡಚಣ ಹತ್ತಿರ ಉಮದಿ ರಸ್ತೆ ಸೇರಿದಂತೆ ಒಟ್ಟು 6 ಕಡೆ ರಸ್ತೆ ಬಂದ್ ಮಾಡಲಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಸೋಲಾಪೂರ ಮತ್ತೀತರ ಕಡೆಗಳಿಂದ ಬರುವವರೆಗೆ ಧೂಳಖೇಡ ಹತ್ತಿರ,ಅಕ್ಕಲಕೋಟದಿಂದ ಬರುವವರನ್ನು ತಡೆಯಲು ಚಿಕ್ಕಮಣೂರ ಹತ್ತಿರ,ಪಂಡರಪೂರ ಮತ್ತೀತರ ಕಡೆಗಳಿಂದ ಬರುವವರೆಗೆ ಶಿರಾಡೋಣ ಹತ್ತಿರ ,ಸಾಂಗಲಿ,ಉಮದಿ,ಜತ್ತ ಇತರೆ ಕಡೆಗಳಿಂದ ಬರುವವರೆಗೆ ಚಡಚಣ ಬಳಿಯ ಉಮದಿ ರಸ್ತೆಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ.ಗಡಿಯಲ್ಲಿ ಬರುವವರ ಮೇಲೆ ತೀವೃ ನಿಗಾ ಇಡಲಾಗುತ್ತದೆ.ಅದಲ್ಲದೆ ಮತ್ತೀತರ ಕಡೆಗಳಿಂದ ಬರುವವರ ಮೇಲೆ ನಿಗಾ ಇಟ್ಟಿದ್ದು,ರಸ್ತೆ ಬಂದ ಮಾಡಿ ತಪಾಸಣೆ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.

ತಪಾಸಣೆಯಲ್ಲಿ ಕಂದಾಯ,ಆರೋಗ್ಯ, ಪೆÇಲೀಸ್ ಇಲಾಖೆ,ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳುವರು.ರಸ್ತೆಯ ಎಲ್ಲ ತಪಾಸಣೆ ಕೇಂದ್ರಗಳಿಗಾಗಿ ಟೆಂಟ್ ಹೊಡೆದಿದ್ದು,ಬ್ಯಾರಿಕೇಡ್ ,ಶಾಮಿಯಾನ್ ಹಾಕಲಾಗಿದೆ .ಹೊರಗಿನಿಂದ ಬರುವವರೆಗೆ ತಿಳುವಳಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕರು ಅನಗತ್ಯ ಓಡಾಟವನ್ನು ನಿಲ್ಲಿಸಬೇಕು. ಮನೆಯಲ್ಲಿಯೇ ಇದ್ದು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು.ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಕೊರೋನಾ ಬಗ್ಗೆ ಭಯಗೊಳ್ಳದೆ ಸುರಕ್ಷತೆಯಲ್ಲಿ ಇರಬೇಕು.ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ ಧರಿಸಬೇಕು.ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರದ ಆದೇಶ ಪಾಲಿಸದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.