ಗುರುಮಠಕಲ:ಜೂ.6: ಗಡಿಭಾಗದಲ್ಲಿರುವ ಕುಂಟಿಮರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮಕ್ಕಳ ಜೊತೆಗೆ ಬಹಳಷ್ಟು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸವರಾಜಪ್ಪ ನವರು ಪರಿಸರ ದಿನಾಚರಣೆ ಕುರಿತು ಮಾತನಾಡಿ ಮಕ್ಕಳು ನೀವು ಹೇಗೆ ಬೆಳೆಯುತ್ತೀರಿ ಹಾಗೆ ಎಲ್ಲರೂ ನಿಮ್ಮ ಮನೆಯಲ್ಲಿ ಒಬ್ಬೊಬ್ಬರು ಐದು ಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಹಿರಿಯ ಶಿಕ್ಷಕರಾದ ಗಂಗಯ್ಯ ಮಠಪತಿ ರವರು ಮಕ್ಕಳಿಗೆ ಪರಿಸರ ದಿನಾಚರಣೆ ಎಂದರೇನು. ಪರಿಸರ ದಿನಾಚರಣೆಯನ್ನು ಏಕೆ ಆಚರಿಸಬೇಕು ಪರಿಸರದಿಂದ ನಮಗೆ ಏನು ಲಾಭ ಎಂಬುವುದನ್ನು ಮಕ್ಕಳಿಗೆ ತಿಳಿಸಿಕೊಟ್ಟರು ಮತ್ತು ಒಂದು ಮರವು ನಮ್ಮ ಹಾಗೆ ಅದು ಒಂದು ಸಜೀವ ವಸ್ತು ಅದನ್ನು ಬೆಳೆಸುವುದರಿಂದ ನಮಗೆ ಒಳ್ಳೆಯ ಗಾಳಿ ಮಳೆ ಬೆಳೆ ಸಿಗುತ್ತದೆ ಎಂಬುದನ್ನು ಹೇಳಿಕೊಟ್ಟರು ಈ ವೇಳೆ ಅತಿಥಿ ಶಿಕ್ಷಕಿಯಾದ ಶ್ರೀ ಲತಾ ಹಾಗು ಗೊರೆನೂರ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಿವಾಸ. ಎಸ್ ಡಿ ಎಂ ಸಿ ಸದಸ್ಯರು ಗಳಾದ ಶ್ರೀ ನಿವಾಸ. ಬಸವರಾಜ. ರಾಜಕುಮಾರ. ಭೀಮಪ್ಪ ಹಾಗೂ ಅಡುಗೆ ಸಿಬ್ಬಂದಿ ಯವರು ಶಾಲಾ ಮಕ್ಕಳು ಉಪಸ್ಥಿತರಿದ್ದರು.