ಗಡಿಭದ್ರತಾ ಪಡೆ ಹತ್ಯೆ ಖಂಡಿಸಿ ಯುವ ಕಾಂಗ್ರೆಸ್ ಶ್ರದ್ಧಾಂಜಲಿ

ಜಗಳೂರು.ಏ.೮: ದೇಶದ ಗಡಿಕಾಯುವ ಯೋಧರ ರಕ್ಷಣೆಗೆಕೇಂದ್ರ ಸರ್ಕಾರ ಹಾಗು ರಕ್ಷಣಾ ಇಲಾಖೆ ಅತ್ಯುನ್ನತ ಭದ್ರತಾ ಸಲಕರಣೆಗಳನ್ನ ನೀಡುವ ಮೂಲಕ ಪ್ರಾಣಗಳನ್ನ ರಕ್ಷಿಸಬೇಕು ಎಂದು ಕೆ.ಪಿ.ಸಿ.ಸಿ.ಎಸ್.ಟಿ  ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಆಗ್ರಹಿಸಿದರು. ಪಟ್ಟಣದ ಮಹಾತ್ಮಗಾಂಧೀ ವೃತ್ತದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಛತ್ತೀಸ್ ಗಡ ದಲ್ಲಿ ನಡೆದ ಗಡಿಭದ್ರತಾ ಪಡೆ ಹತ್ಯೆ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಮೌನಾಚರಣೆ ನೆಡೆಸಿ ಮಾತನಾಡಿದರು ಕೇಂದ್ರ ಸರ್ಕಾರದ ಆಂತರಿಕ ರಕ್ಷಣಾ ವೈಪಲ್ಯದಿಂದಾಗಿ ನಕ್ಸಲ್ ನಂತಹ ದಂಡುಕೋರರು ದೇಶದ ಒಳಗೆ ನುಸುಳವಂತಾಗಿದೆ  ಮೃತ ಪಟ್ಟ ಯೋದರಿಗೆ ನಾವೆಲ್ಲರು ಗೌರವ ಸೂಚಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೂರೋಣ ಎಂದರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ ಮಾತನಾಡಿ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಕಾಯುವ ಸೈನಿಕರಿಗೆ ಭದ್ರತೆ ಇಲ್ಲದಂತಾಗಿದೆ  ಪುಲ್ವಾಮ ದಾಳಿ ಮಾಸುವ ಮುನ್ನವೇ ಇಂತಹ ಘಟನೆ ನೆಡದಿರುವುದು ದುರಂತ ಸಂಗತಿ ಬರೀ ಮಾತಿನಲ್ಲಿಯೇ ದೇಶ ಆಳುವ ವೀರ ಯೋಧರು ತಮ್ಮ ಪ್ರಾಣ ಕಳೆದುಕೊಳ್ಳುವಂತಾಗಿದೆ ಕೇವಲ ಮಾತುಗಳಿಂದ ನಕಲಿ ದೇಶ ಪ್ರೇಮ ತೋರ್ಪಡಿಸುವ ಮೂಲಕ ವಂಚಿಸುತ್ತಿದ್ದಾರೆ
ಕಾಂಗ್ರೆಸ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ದೇಶ ಕಾಯುವ ಯೋಧರಿಗೆ ಗುಣಮಟ್ಟದ ಆಹಾರ ಸಮವಸ್ತ್ರ ಹಾಗುಅತ್ಯಾಧುನಿಕ‌ ಗುಣಮಟ್ಟ ರಕ್ಷ ಕವಚಗಳನ್ನ ಒದಗಿಸಿವ ಮೂಲಕ ಪ್ರಾಣ ಕಾಪಾಡಲಾಗುತ್ತಿತ್ತು ದೇಶದ ಇಪ್ಪತ್ತಕ್ಕು ಹೆಚ್ಚು ವೀರ ಮರಣ ಹೊಂದಿರುವುದರಿಂದ ತಾಯ್ನಾಡು ಮಕ್ಕಳನ್ನ ಕಳೆದು ಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ ಎಸ್.ಟಿ  ಘಟಕ ಅಧ್ಯಕ್ಷ ಬಿ.ಲೋಕೇಶ್ 
ಕಾರ್ಮಿಕ ಘಟಕ ಅಧ್ಯಕ್ಷ ರೇವಣ್ಣ ಯುವ ಕಾಂಗ್ರೆಸ್ ಅಧ್ಯಕ್ಷರು ವಿಜಯ್ ಕೆಂಚೋಳ್ ಎನ್.ಟಿ.ತಿಪ್ಪೇಸ್ವಾಮಿ  ಕಾರ್ಯಕರ್ತರಾದ ಜಮೀಲ್ ಶಿವಣ್ಣ ಕಾಟಪ್ಪ ನಾಗಣ್ಣ ಹರೀಶ್ ರೆಡ್ಡಿ ಅನಿಲ್ ಸೇರಿದಂತೆ ಹಲವರು ಇದ್ದರು.