ಗಡಿಪಾರು ಮಾಡಿ: ಜಾವೀದ ಮೋಮಿನ್

ಇಂಡಿ:ನ.19: ಇಸ್ಲಾಂ ಧರ್ಮದ ಪ್ರವಾದಿಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೋಳ್ಳುವಂತೆ ಒತ್ತಾಯಿಸಿ ಗುರುವಾರ ಝಾಕೀರ ಹುಸೇನ ಸೋಸಿಯಲ್ ಕಮೀಟಿ , ಟಿಪ್ಪು ಕ್ರಾಂತಿ ಸೇನೆ ಜಂಟಯಾಗಿ ನೂರಾರು ಕಾರ್ಯಕರ್ತರು ಸಂಘಟಕರು ಮಿನಿ ವಿಧಾನಸೌಧಾಕ್ಕೆ ತೆರಳಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆಯವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ದೇಶದ ಸಂವಿಧಾನ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿ ಬದುಕಲು ಅವಕಾಶ ನೀಡಿದೆ. ಎಲ್ಲಾ ಧರ್ಮಕ್ಕೂ ತಮ್ಮದೆಯಾದ ಗೌರವ ವಿರುತ್ತದೆ. ಇಂದು ಸಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೋಬ್ಬ ಇಸ್ಲಾಂ ಧರ್ಮದ ಗುರುಗಳ ಬಗ್ಗೆ ಅಮಾನವೀಯ ಮಾತುಗಳು ಆಡಿರುವುದು ಇಡೀ ಇಸ್ಲಾಂ ಸಮುದಾಯಕ್ಕೆ ನೋವನ್ನುಂಟ್ಟು ಮಾಡಿದೆ.
ಪ್ರತಿಯೊಂದು ಧರ್ಮ ಮಾನವೀಯ ಮೌಲ್ಯಗಳ ಸಂದೇಶವನ್ನೆ ಸಾರಿದೆ ಆದರೆ ಸಮಾಜ ಘಾತಕ ಶಕ್ತಿಗಳು ಇಂತಹ ಹೇಳಿಕೆ ನೀಡಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಕೋಡಲೆ ಇಂತಹ ಕಿಡಿಗೇಡಿಯನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

 ಹಿಂದು ,ಮುಸ್ಲಿಂ ಭಾವೈಕ್ಯತೆಗೆ ಧಕ್ಕೆಯನ್ನುಂಟ್ಟು ಮಾಡುವ ಹುನ್ನಾರ, ದೇಶದ ಸಂವಿಧಾನ ಸಾರ್ವಭೌಮತೆ ಹಾಳುಮಾಡಿ ಧರ್ಮ ,ಧರ್ಮಗಳ ಮಧ್ಯ ಕಂದಕ ಸೃಷ್ಠಿ ಮಾಡುತ್ತಿರುವ  ವಸೀಂ ರಿಜ್ವೀ, ಅಸ್ವಾನಂದ ಸರಸ್ವತಿ ಇವರನ್ನು ಬಂಧಿಸಬೇಕು. ಇಲ್ಲವಾದರೆ ರಾಜ್ಯ,ದೇಶಾದ್ಯೆಂತ ಉಗ್ರಹೋರಾಟ ಮಾಡಲಾಗುವುದು ಎಂದು ಜಾವೀದ ಮೋಮಿನ ಹೇಳಿದರು.

ಹಾಪೀಜ ಫಿರೋಜ, ಫಜಲುಲ ಮುಲ್ಲಾ, ಮಹಿಬೂಬ ಬೇನೂರ,ಇಮ್ರಾನ ಮುಜಾವರ,ಮಹಮ್ಮದ ಗುಲಬರ್ಗಾ, ಇಸ್ಲಾಂ ಧರ್ಮ ಗುರುವಿಗೆ ಅವಹೇಳನಕಾರಿ ಮಾತನಾಡಿದ ಆರೋಪಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಜಾಹಾಂಗೀರ ಸೌದಾಗರ್, ಅಮೀನ ಮುಲ್ಲಾ, ಜಬ್ಬಾರಣ್ಣಾ ಅರಬ, ಇಸ್ಮಾಯಿಲ್ ರಬ, ಜಮದಾರ ಸರ್, ಅಯುಬ ಬಾಗವಾನ ಮುಸ್ತಾಕ ಇಂಡಿಕರ್, ರಂಜಾನ ವಾಲೀಕಾರ, ಜಮೀರ್ ಇಂಡಿಕರ್, ಸಲ್ಲಾವುದೀನ ನಾಗೂರ, ಹಸನ ಮುಜಾವರ, ಸಲೀಮ ಮುಲ್ಲಾ ಸೇರಿದಂತೆ ಅನೇಕರಿದ್ದರು.