ಗಡಿನಾಡು ಜಾನಪದ ಉತ್ಸವ, ಸಾಂಸ್ಕೃತಿ ಉತ್ಸವ

ಮಾನ್ವಿ,ಮಾ.೨೭- ತಾಲೂಕಿನ ಚಿಕ್ಕಲಪರ್ವಿ ಗ್ರಾಮದ ಶ್ರೀ ರುದ್ರಮುನೀಶ್ವರ ಮಠದ ಆವರಣದಲ್ಲಿ ಹಸಮಕಲ್‌ನ ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಂಯುಕ್ತಶ್ರಯದಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಅಂಗವಾಗಿ ನಡೆದ ಗಡಿನಾಡು ಜಾನಪದ ಉತ್ಸವ, ಸಾಂಸ್ಕೃತಿ ಉತ್ಸವ -೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ಮಠ ಮಾನ್ಯಗಳು ಮಹತ್ವವಾದ ಪಾತ್ರವನ್ನು ವಹಿಸುತ್ತ ಬಂದಿವೆ.
ಗಡಿಯಾಚೆಗಿನ ಆಂಧ್ರಪ್ರದೇಶದಲ್ಲಿನ ಗ್ರಾಮಗಳಲ್ಲಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದರಿಂದ ಹಾಗೂ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯವಾದ ನೆರವನ್ನು ರಾಜ್ಯ ಸರಕಾರ ಮಾಡಿದಾಗ ಮಾತ್ರ ಗಡಿ ಭಾಗದಲ್ಲಿ ಕನ್ನಡತನ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮೈಸೂರಿನ ನಿರಂಜನ ಶ್ರೀಗಳು ಮಾತನಾಡಿದರು. ಗಡಿ ಭಾಗಗಳಲ್ಲಿ ಕನ್ನಡ ಬಾಷೆ ಮತ್ತು ಸಂಸ್ಕೃತಿಯ ಅಳಿವು ಉಳಿವು ವಿಷಯದ ಕುರಿತು ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ.ನರಸಿಂಹ ಉಪನ್ಯಾಸ ನೀಡಿ ತಾಲೂಕಿನ ಗಡಿ ಭಾಗದಲ್ಲಿನ ಆಂಧ್ರಪ್ರದೇಶಕ್ಕೆ ಸೇರಿದ ೩೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇಂದಿಗೂ ಕೂಡ ಕನ್ನಡವನ್ನು ಮಾತನಾಡುವ ಜನರಿದ್ದು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣವನ್ನು ನೀಡುತ್ತಿರುವುದಕ್ಕೆ ಅವರಲ್ಲಿನ ಕನ್ನಡ ಭಾಷೆಯ ಮೇಲಿನ ಪ್ರೀತಿಯೇ ಕಾರಣವಾಗಿದ್ದು ಗಡಿ ಭಾಗದಲ್ಲಿನ ಕನ್ನಡ ಶಾಲೆಗಳಿಗೆ ರಾಜ್ಯ ಸರಕಾರದಿಂದ ಅಗತ್ಯವಾದ ಸೌಲಭ್ಯ ಹಾಗೂ ಪಠ್ಯ ಪುಸ್ತಕಗಳ ವಿತರಣೆ ಶಿಕ್ಷಕರ ನೇಮಕ ಆದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಸಮಕಲ್‌ನ ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್ ವತಿಯಿಂದ ೨೦೨೨ ನೇ ಸಾಲಿನ ರಾಜ್ಯ ಮಟ್ಟದ ಶ್ರೀ ಬಹುರೂಪಿ ಚೌಡಯ್ಯ ಕಲಾರತ್ನ ಪ್ರಶಸ್ತಿಯನ್ನು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಅಂಬಯ್ಯನೂಲಿ, ವಿರೇಶ ಸಾಲಿಮಠ, ವಿ. ರಾಮಚಂದ್ರಪ್ಪ, ಹಗಲುವೇಷ ಕಲಾವಿದರಾದ ಬಾಲಪ್ಪ ಮೋತಿ,ಚಿನ್ನಪ್ಪ, ಡೊಳ್ಳಿನಪದ ಗಾಯಕರಾದ ಯಮನಪ್ಪ ಕವಳಿ, ಹೊನ್ನಪ್ಪ ಕಟ್ಟಿಮನಿ, ಭಜನಿ ಪದ ಕಲಾವಿದ ಹುಸೇನಪ್ಪ ಹೆಡಿವಾಳ, ವಿರುಪಮ್ಮ ಮಾಡಶಿರವಾರ, ಐಹೊಳೆಪ್ಪ ಗೊಂಗಡಿ,ಗೋವಿಂದಪ್ಪ ನಾಯಕ ರವರಿಗೆ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ಅಂತರಾಷ್ಟ್ರೀಯ ಕಲಾವಿದರಾದ ವಿ,ರಾಮಚಂದ್ರ ಶಾಕಲದೇವನಪುರ ತಂಡದವರಿಂದ ಕನ್ನಡ ಗೀತೆಗಳ ಗಾಯನ, ವೀರೇಶ ಸಾಲಿಮಠರಿಂದ ನಾಡಗೀತೆ, ಮಲ್ಲಪ್ಪ ಹಸಮಕಲ್ ಮತ್ತು ತಂಡದವರಿಂದ ತತ್ವಪದ ಗಾಯನ , ಮಾಡಶಿರವಾರದ ಲೋಕಮ್ಮ ಮತ್ತು ಸಂಗಡಿಗರಿಂದ ಸಂಪ್ರದಾಯ ಗೀತೆಗಳ ಗಾಯನ,ಚಿನ್ನಪ್ಪ ಯಾಪಲಪರ್ವಿ ಮತ್ತು ಸಂಗಡಿಗರಿಂದ ವಚನಗಾಯನವನ್ನು ನಡೆಸಿಕೊಟ್ಟರು.
ಗ್ರಾಮದ ಮುಖ್ಯ ಬೀದಿಗಳಲ್ಲಿ ಜನಪಾದ ಕಲಾ ತಂಡಗಳು ಹಾಗೂ ಜನಪಾದ ಕಲಾವಿದರಾದ ಹಸಮಕಲ್ ಗ್ರಾಮದ ಹಗಲು ವೇಷ ಕಲಾ ತಂಡದವರು, ದ್ಯಾವಪ್ಪ ದೇವಪುರ ಮತ್ತು ತಂಡದವರಿಂದ ಹಲಗಿ ವಾದನ, ಈರಣ್ಣ ಹಾಗೂ ಸಂಗಡಿಗರಿಂದ ಡೊಳ್ಳು ಕುಣಿತ ದೊಂದಿಗೆ ಶ್ರೀ ಮಠದ ವೇದಿಕೆಯ ವರೆಗೆ ಮೇರವಣಿಗೆ ನಡೆಯಿತು.
ಹಸಮಕಲ್‌ನ ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್ನ ಅಧ್ಯಕ್ಷರಾದ ಆಮರೇಶ ಹಸಮಕಲ್, ಕಾರ್ಯದರ್ಶಿ ಜಂಬಣ್ಣ ಹಸಮಕಲ್.
ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ, ಗ್ರಾ.ಪಂ. ಉಪಾಧ್ಯಕ್ಷೆ ದುರುಗಮ್ಮ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿಗಳು ತಾಯಪ್ಪ ಬಿ.ಹೊಸೂರು, ಕ.ಸಾ.ಪ. ತಾಲೂಕ ಅಧ್ಯಕ್ಷ ರವಿಕುಮಾರ ಪಾಟೀಲ್, ಗ್ರಾ.ಪಂ. ಸದಸ್ಯರಾದ ಮರಿಯಮ್ಮ, ಚಂದ್ರಶೇಖರ, ಮಲ್ಲಯ್ಯ,ಲಕ್ಷಿ?ಮ, ತಾಜುದ್ದೀನ್, ಹುಶೇನ್, ಸಬ್ಬಮ್ಮ, ರಾಜ್ಯ ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರಿ, ಮುಖಂಡರಾದ ಬಸವರಾಜ ಕನ್ನಾರಿ,ಪ್ರಕಾಶ, ನವೀನ್ ಕುಮಾರ, ರಾಮಚಂದ್ರಪ್ಪ, ತಿಮ್ಮಯ್ಯ ಬಂಗಾರಿ, ಜಯಶೀಲ, ರಾಮಯ್ಯನಾಯಕ ಕಾಡ್ಲೂರು ಸೇರಿದಂತೆ ಕಲಾವಿದರು ಹಾಗೂ ಗ್ರಾಮಸ್ಥಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.