ಗಡಿನಾಡಿನಲ್ಲಿ ಸಂಭ್ರಮಿಸಲ್ಪಟ್ಟ ಕನ್ನಡ ಜಾಗೃತಿ ಸಾಂಸ್ಕøತಿಕ ಉತ್ಸವ

ಗುರುಮಠಕಲ್:ಮಾ.13:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಆಶ್ರಯದಲ್ಲಿ ಮತ್ತು ನೇತಾಜಿ ಸುಭಾಷ ಚಂದ್ರ ಬೋಸ್ ಎಜ್ಯೂಕೇಷನ್ ಚಾರಿಟೇಬಲ್ ಟ್ರಸ್ಟ್ ಯಾದಗಿರಿ ಇವುಗಳ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪಿಗಾಗಿ 2022- 23 ನೇ ಸಾಲಿನಲ್ಲಿ ರವಿವಾರ ಬೆಳ್ಳಿಗೆ ಸಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿಮರಿಯಲ್ಲಿ ಜರುಗಿದ ಗಡಿನಾಡು ಸಾಂಸ್ಕೃತಿಕ ಉತ್ಸವವನ್ನು ಬಾಲರೆಡ್ಡಿ ಊರಿನ ಹಿರಿಯ ಮುಂಖಡರು ಉದ್ಘಾಟಿಸಿದರು.
ಉದ್ಘಾಟಿಸಿ ನಂತರ ಮಾತನಾಡಿದ ಅವರು “ಸಾಮರಸ್ಯದ ಬಾಳಿಗೆ ಗಡಿನಾಡುಗಳೇ ಆಡಿಪಾಯವಾಗಿವೆಂದು. ಇಂದು ಊರಿನ ಹಿರಿ-ಕಿರಿಯ ರಿಂದ ಜಾಥ ಬಹಳ ವಿಶೇಷವಾಗಿತ್ತು, ಇಂತಹ ಗಡಿ ಭಾಗದಲ್ಲಿ ಕನ್ನಡ ಬಗ್ಗೆ ಜಾಗೃತಿ ಮೂಡಿಸುತ್ತಿರುವರಿಂದ ಕನ್ನಡ ಉಳಿದಿದ್ದೆ ಎಂದರು.
ಗಡಿನಾಡಿನ ಬಗ್ಗೆ ವಿಶೇಷ ಉಪನ್ಯಾಸ ಗಡಿ ಬಾಗದ ಕನ್ನಡಿಗರ ಸ್ಥಿತಿ- ಗಣಿಗಳು ಅನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಗುರುಪ್ರಸಾದ ವೈದ್ಯ – ಗಡಿನಾಡು ಭಾಗದಲ್ಲಿನ ಸಾಹಿತಿಗಳು, ಕಲಾವಿದರು,ಪತ್ರಕರ್ತರು ಅಲ್ಲದೆ ಎಲ್ಲಾ ಪ್ರತಿಭೆಗಳನ್ನು ಗುರುತಿಸುವಂತಾದಾಗ ನಮ್ಮ ಭಾಷಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡ ನಾಡು ನುಡಿಯ ಸೇವೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿಮರಿ ಮುಖ್ಯ ಗುರುಗಳು
ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ಜರುಗಿತು ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯಿತಿ ಸದಸ್ಯರು ಪದ್ಮಮ್ಮ ವೆಂಕಟರೆಡ್ಡಿ , ಬಸಪ್ಪ, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ತಮ್ಮರೆಡ್ಡಿ. ಶಾಲೆಯ ಎಸ್ ಡಿ ಎಮ್ ಸಿ ಉಪಾಧ್ಯಕ್ಷರು ಭೀಮಮ್ಮ, ವೇದಿಕೆಯ ಅತಿಥಿಗಳಾಗಿ ಬಸವಂತರಾಯ್ಯ ಗೌಡ, ಭೀಮರಾಯ ಅನಪೂರ, ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಗಡಿನಾಡು ಸಾಂಸ್ಕೃತಿಕ ಉತ್ಸವ ಪ್ರಾರಂಭ ಗೊಂಡು. ಯೇಸುಮಿತ್ರ ನಿರೂಪಿಸಿದರು, ಶಶಿಕುಮಾರ ಕುಂಟಿಮರಿ ಸ್ವಾಗತಿಸಿದರು, ನೇತಾಜಿ ಟ್ರಸ್ಟ್ ಕಾರ್ಯದರ್ಶಿ ಅರುಣಕುಮಾರ ಪ್ರಸ್ತಾವನೆಗೈದರು, ಗಂಗಯ್ಯ ಮಠಪತಿ ಸಹ ಶಿಕ್ಷರಕು ವಂದಸಿದರು. ಅತಿಥಿ ಶಿಕ್ಷಕಿಯರಾದ ಶ್ರೀಲತ ಇದ್ದರು
ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಾಡು ನುಡಿಯ ಕುರಿತು ವಾಚನ, ಸಮೂಹ ಗಾನ, ಡೊಳ್ಳು ಕುಣಿತ, ತತ್ವಪದ, ಕೋಲಟ, ಸೋಬಾನೆ ಪದಗಳು.ಮತ್ತು ಶಾಲಾ ಮಕ್ಕಳಿಂದ ವೇಷಭೂಷಣ,ನೃತ್ಯ, ಕವಿಗಾನ ಕನ್ನಡಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡವು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡುವುದರ ಜೊತೆಗೆ ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಗ್ರಾಮದ ಜನರು ಭಾಗವಹಿಸಿ ಗಡಿನಾಡು ಕನ್ನಡ ಉತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.