ಗಡಿಗ್ರಾಮದಲ್ಲಿ ಬಡವನ ಕಣ್ಣೀರು

ಕಲಬುರಗಿ ಏ 3: ಕಲಬುರಗಿಯ ಚನ್ನಬಸವೇಶ್ವರ ಕಲಾವಿದರ ನಾಟ್ಯ ಸಂಘದ ವತಿಯಿಂದ ಅಫಜಲಪುರ ತಾಲೂಕಿನ ಗಡಿಗ್ರಾಮ ಆನೂರ ಗ್ರಾಮದ ಚಂದ್ರಗಿರಿ ದೇವಸ್ಥಾನದ ಆವರಣದಲ್ಲಿ ಬಡವನ ಕಣ್ಣೀರು ಎಂಬ ಸಾಮಾಜಿಕ ನಾಟಕ ಪ್ರದರ್ಶನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಲಬುರಗಿಯ ಧನರಾಜ ಡೋಕ್ಕೆ ತಂಡದವರು ನಾಟಕ ಪ್ರದರ್ಶನ ನೀಡಿದರು. ನಾಟಕ ಪ್ರದರ್ಶನವನ್ನು ಜಿಪಂ ಸದಸ್ಯ ಎಸ್.ಎಸ್ ನಾಗೂರ ಉದ್ಘಾಟಿಸಿದರು. ತಾಪಂ ಸದಸ್ಯ ಎಸ್ ಎಸ್ ಕಡ್ಲೇವಾಡ,ಗ್ರಾಪಂ ಅಧ್ಯಕ್ಷ ಸಿದ್ದು ಹೀರಾಪುರ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.ಗ್ರಾಮಸ್ಥರು ನಾಟಕವನ್ನು ವೀಕ್ಷಿಸಿ ಸಂತೋಷ,ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಚನ್ನಬಸವೇಶ್ವರ ಕಲಾವಿದರ ನಾಟ್ಯ ಸಂಘದ ಅಧ್ಯಕ್ಷ ರಾಜಕುಮಾರ ಕಟ್ಟಿಮನಿ ಮತ್ತು ಕಾರ್ಯದರ್ಶಿ ಸಾಯಿನಾಥ ಬಿ.ಕೆ ತಿಳಿಸಿದ್ದಾರೆ.