ಗಡಿಕೇಶ್ವಾರ-ಹೊಡೆಬೀರ ವಾಹನ ಸಂಚಾರ ಸ್ಥಗಿತ: ತಹಶಿಲ್ದಾರ ಭೇಟಿ

ಚಿಂಚೋಳಿ,ಸೆ.12- ತಾಲ್ಲೂಕಿನ ಗಡಿಕೇಶ್ವಾರ- ಗ್ರಾಮದಿಂದ ಹೊಡೆಬೀರನಳ್ಳಿಗೆ ಹೋಗುವ ಮುಖ್ಯ ರಸ್ತೆಯ ಬ್ರಿಜ್ ಕಂಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ನಿನ್ನೆ ಶುಕ್ರವಾg ಸುರಿದ ಮಳೆಯಿಂದಾಗಿ ಈ ಮಾರ್ಗದ ವಾಹನ ಸಂಚಾರಕ್ಕೆ ಸಾರ್ವಜನಿಕರು ತೊಂದರೆ ಆನುಭವಿಸಿದರು.
ಸುದ್ದಿ ತಿಳಿದ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ಸ್ಥಳಕ್ಕೆ ಭೇಟಿನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು, ಸಂಬಂಧಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು.
ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು, ಸುದ್ದಿಗಾರ ಜತೆ ಮಾತನಾಡಿ, ಈ ರಸ್ತೆಯಲ್ಲಿ ಹೊಸದಾಗಿ ಗುಮ್ಮಿಗಳು ಹಾಕುವುದಕ್ಕೆ ರಸ್ತೆ ಅಗೆದಿರುವುದಕ್ಕೆ ಮಳೆ ಬಂದಿರುವುದರಿಂದ ಕೆಸರು ಗದ್ದೆಯಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಅಡಚಣೆ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಸಂಬಂಧಿಸಿದ ಕಾಳಗಿ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗೆ ಆದಷ್ಟು ಬೇಗನೆ ಸಾರ್ವಜನಿಕರಿಗೆ ವಾಹನಗಳಿಗೆ ತೊ0ದರೆ ಆಗದಂತೆ ಕಾಮಗಾರಿಯನ್ನು ಶಿಘ್ರವೇ
ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರೇಟ್ 2 ತಹಸೀಲ್ದಾರ್ ವೆಂಕಟೇಶ್ ದುಗ್ಗನ್, ಸುಲೇಪೇಟ ಕಂದಾಯ ನೀರಿಕ್ಷಕರು ಕೇಶವರಾವ ಕುಲಕರ್ಣಿ, ರವಿಕುಮಾರ ಚಿಡ್ತಾ ಇದ್ದರು.