ಗಡಿಕೇಶ್ವರ್ ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಯಾಕಾಪೂರ್ ಆಗ್ರಹ

ಚಿಂಚೋಳಿ,ನ.9- ತಾಲೂಕಿನ ಗಡಿಕೇಶ್ವರ್ ಗ್ರಾಮದಲ್ಲಿ ಹಲವು ತಿಂಗಳಿಂದ ಭೂಕಂಪ ಸಂಭವಿಸುತ್ತಲಿದ್ದು, ಗ್ರಾಮದ ಜನರು ಭಯಬೀತರಾಗಿದ್ದಾರೆ ಇಲ್ಲಿನ ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕೂಡಲೇ ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪೂರ ಅವರು ಒತ್ತಾಯಿಸಿದ್ದಾರೆ.
ಭಯದಿಂದಾಗಿ ಗ್ರಾಮದ ಕೆಲವರು ಗ್ರಾಮವನ್ನೇ ಬಿಟ್ಟು ಹೋಗಿದ್ದಾರೆ ಆದರೂ ಕೂಡ ಸರ್ಕಾರವು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಡಿಕೇಶ್ವರ್ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಕೆಲಸವನ್ನೇ ಮಾಡಿಲ್ಲ ಕೆವಲ ಕಾಟಾಚಾರಕ್ಕೆ ಮಾತ್ರ ಕಂದಾಯ ಸಚಿವರು ಹಾಗೂ ಲೋಕಸಭಾ ಸದಸ್ಯರು, ಶಾಸಕರು ಭೇಟಿ ನೀಡಿ ಹೋಗಿದ್ದಾರೆ ಎಂದು ಅರೋಪಿಸಿದರು.
ಗಡಿಕೇಶ್ವರ್ ಗ್ರಾಮದ ಜನರಿಗೆ ಶಡ್ ನಿರ್ಮಾಣ ಮಾಡುವುದಾಗಿ ಮತ್ತು ಗ್ರಾಮದ ಜನರಿಗೆ ವಿವಿಧ ಯೋಜನೆಗಳ ಘೋಷಣೆ ಮಾಡದೆ ಹೋಗಿದ್ದಾರೆ ಅದರಿಂದ ಗಡಿಕೇಶ್ವರ್ ಗ್ರಾಮದ ಜನರು ಬಹಳಷ್ಟು ಸಂಕಷ್ಟದಲ್ಲಿದ್ದು ಕೂಡಲೇ ರಾಜ್ಯ ಸರ್ಕಾರದಿಂದ ಗಡಿಗೇಶ್ವರ ಗ್ರಾಮದ ಜನರಿಗೆ ಪ್ರತಿಯೊಂದು ಮನೆಗಳಿಗೆ ಶಡ್ ನಿರ್ಮಾಣ ಮಾಡಿಕೊಡಬೇಕು ಹಾಗೂ ಗ್ರಾಮಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಯಾಕಾಪೂರ್ ಒತ್ತಾಯಿಸಿದ್ದಾಋಎ.
ಗ್ರಾಮದ ಬೇಡಿಕೆಗಳಿಗೆ ಒತ್ತಾಯಿಸಿ ಮನವಿಯನ್ನು ಇದೇ ನವೆಂಬರ್ 11ರಂದು ಕಲ್ಬುರ್ಗಿ ಉಸ್ತುವಾರಿ ಸಚಿವರು, ಗಡಿಕೇಶ್ವರ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಅವರನ್ನು ತಾವು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡುವುದಾಗಿಎ ಹೇಳಿದರು.
ಈ ಗ್ರಾಮವು ಗ್ರಾಮದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕಲಬುರ್ಗಿ ಉಸ್ತುವಾರಿ ಸಚಿವರು ಘೋಷಣೆ ಮಾಡಿ ಹೋಗಬೇಕು ಕಾಟಾಚಾರಕ್ಕಾಗಿ ಮಾಡಬಾರದು ಏಕೆಂದರೆ ಈಗಾಗಲೇ ಕಾಟಾಚಾರಕ್ಕೆ ಕಂದಾಯ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ಹೋಗಿದ್ದಾರೆ ಇಲ್ಲ ವರೆಗೂ ಯಾವುದೇ ಒಂದು ಅಭಿವೃದ್ಧಿ ಗಡಿಕೇಶ್ವರ್ ಗ್ರಾಮದಲ್ಲಿ ಆಗಿಲ್ಲ ಇದರಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಫಲತೆ ಎದ್ದು ಕಾಣುತ್ತಿದೆ ಅದೇ ರೀತಿ ರಾಜ್ಯದ ಮತ್ತು ಅಂತ ರಾಜ್ಯದ ಭೂಕಂಪ ವಿಜ್ಞಾನಿಗಳು ತಂಡವು ಗ್ರಾಮಕ್ಕೆ ಭೇಟಿ ನೀಡಿದ್ದಾರೆ ವಿಜ್ಞಾನಿಗಳಿಂದ ಆದಷ್ಟು ಬೇಗನೆ ವರದಿ ತರಿಸಿಕೊಂಡು ಗಡಿಕೇಶ್ವರ್ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ