ಗಡಿಕೇಶ್ವರದಲ್ಲಿ ರಾಧಾಕೃಷ್ಣ ದೊಡ್ಡಮನಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭವ್ಯ ಸ್ವಾಗತ

ಸೇಡಂ,ಏ. 19: ಲೋಕಸಭೆ ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯವರು ಸೇಡಂ ಮತಕ್ಷೇತ್ರ ವ್ಯಾಪ್ತಿಯ ಗಡಿಕೇಶ್ವರ ಗ್ರಾಮಕ್ಕೆ ಮತಯಾಚಿಸಲು ಬಂದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರು, ವಿಜೃಂಭಣೆಯಿಂದ ಬರಮಾಡಿಕೊಂಡರು.
ಸಭೆಯಲ್ಲಿ ಮಾತನಾಡಿದ ರಾಧಾಕೃಷ್ಣ ದೊಡ್ಡಮನಿ ಅವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ.ನೀವು ಮೊದಲಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದು,ಈ ಸಲ ನಮ್ಮನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಬಾಲೆ ಸಾಬ್, ಚಂದ್ರಶೇಖರ್ ಕಂಬಾರ್, ಸಿದ್ದಾರ್ಥ್ ರಂಗನೂರ, ಮಹದೇವಪ್ಪ ಮುಖರಂಬಿ, ಜಗನ್ನಾಥ್ ಚಿಂತಪಳ್ಳಿ, ರೇವಣಸಿದ್ದಪ್ಪ ಆನೇಕಲ್, ಶಿವಕುಮಾರ್ ಬಟಿಗೇರ, ಬಸವರಾಜ್, ಲಿಂಗ ಶೆಟ್ಟಿ ರುದ್ನುರ್, ವಿಶ್ವನಾಥ್ ಪಾಟೀಲ್, ಪದವಯ್ಯ ಚಂದ್ರು, ಸತೀಶ್ ಪೂಜಾರಿ, ಅರುಣ್ ಕುಮಾರ್ ರಂಗನೂರ್, ಅನೇಕರು ಇದ್ದರು.